Versions
KNV ಆಗ ಕೋಲುಗಳು ದೈವೋಕ್ತಿಯ ಸ್ಥಾನದ ಮುಂದೆ ಪರಿಶುದ್ಧ ಸ್ಥಳದಲ್ಲಿ ಕಾಣಲ್ಪಡುವ ಹಾಗೆ ಎಳಕೊಂಡರು; ಆದರೆ ಅವು ಹೊರಗೆ ಕಾಣಲ್ಪಡಲಿಲ್ಲ. ಅಲ್ಲಿ ಅವು ಇಂದಿನ ವರೆಗೂ ಇರುತ್ತವೆ.
ERVKN ಈ ಹೊರುವ ಕೋಲುಗಳು ಬಹಳ ಉದ್ದವಾಗಿದ್ದವು. ಮಹಾ ಪವಿತ್ರಸ್ಥಳದ ಎದುರಿನ ಪವಿತ್ರಸ್ಥಳದಲ್ಲಿ ನಿಂತುಕೊಳ್ಳುವ ಯಾವ ವ್ಯಕ್ತಿಯೇ ಆಗಲಿ ಈ ಕೋಲುಗಳ ತುದಿಯನ್ನು ಕಾಣಬಹುದಾಗಿತ್ತು. ಆದರೆ ಹೊರಗಿರುವ ಯಾರೂ ಅವುಗಳನ್ನು ನೋಡುವುದಕ್ಕಾಗುವುದಿಲ್ಲ. ಈ ಕೋಲುಗಳು ಇಂದಿಗೂ ಅಲ್ಲಿವೆ.
IRVKN ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗೃಹದ ಎದುರಿನಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸಿದರೂ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲೇ ಇವೆ.