Versions
KNV ನೀವು ನನ್ನನ್ನು ರಕ್ಷಿಸುವದಿ ಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡುಕೊಂಡು ಅಮ್ಮೋನನ ಮಕ್ಕಳಿಗೆ ವಿರೋಧವಾಗಿ ಹೋದೆನು; ಕರ್ತನು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟನು. ನೀವು ನನ್ನ ಸಂಗಡ ಯುದ್ಧಮಾಡುವದಕ್ಕೆ ಈಹೊತ್ತು ನನಗೆ ವಿರೋಧವಾಗಿ ಯಾಕೆ ಬಂದಿರಿ ಅಂದನು.
ERVKN ನೀವು ನಮ್ಮ ಸಹಾಯಕ್ಕೆ ಬರುವುದಿಲ್ಲವೆಂದು ತಿಳಿದಾಗ ನಾನು ನನ್ನ ಜೀವವನ್ನೇ ಗಂಡಾಂತರಕ್ಕೆ ಒಡ್ಡಿದೆ. ಅಮ್ಮೋನಿಯರ ವಿರುದ್ಧ ಯುದ್ಧಮಾಡಲು ನಾನು ನದಿಯನ್ನು ದಾಟಿಹೋದೆ. ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯ ಮಾಡಿದನು. ಈಗ ನೀವು ನನ್ನ ಸಂಗಡ ಯುದ್ಧ ಮಾಡುವುದಕ್ಕಾಗಿ ಏಕೆ ಬಂದಿದ್ದೀರಿ?” ಎಂದು ಕೇಳಿದನು.