Versions
KNV ಆಕಾಶಗಳನ್ನು ನಿರ್ಮಿಸಿದ ಕರ್ತನು ಇಂತೆನ್ನು ತ್ತಾನೆ--ದೇವರು ತಾನೇ ಭೂಮಿಯನ್ನು ನಿರ್ಮಿಸಿ ಅದನ್ನು ಉಂಟು ಮಾಡಿದನು. ಆತನೇ ಅದನ್ನು ಸ್ಥಾಪಿಸಿದನು; ಅದನ್ನು ವ್ಯರ್ಥವಾಗಿ ಸೃಷ್ಟಿಸದೇ ಜನ ನಿವಾಸಕ್ಕಾಗಿಯೇ ರೂಪಿಸಿದನು; ನಾನೇ ಕರ್ತನು, ಮತ್ತೊಬ್ಬನಿಲ್ಲ.
ERVKN ಯೆಹೋವನು ದೇವರಾಗಿದ್ದಾನೆ. ಆತನು ಭೂಮ್ಯಾಕಾಶಗಳನ್ನು ಉಂಟುಮಾಡಿದ್ದಾನೆ. ಆತನು ಭೂಮಿಯನ್ನು ಅದರ ಸ್ಥಾನದಲ್ಲಿ ಇಟ್ಟಿದ್ದಾನೆ. ಆತನು ಈ ಲೋಕವನ್ನು ಸೃಷ್ಟಿಸಿದ್ದು ಅದು ಶೂನ್ಯವಾಗಿರಲೆಂದಲ್ಲ. ಅದು ಜನಭರಿತವಾಗಿರಲೆಂದೇ ಸೃಷ್ಟಿಸಿದನು. “ನಾನೇ ಯೆಹೋವನು, ನನ್ನ ಹೊರತು ಬೇರೆ ದೇವರುಗಳಿಲ್ಲ.