Versions
KNV ಆ ದಿನದಲ್ಲಿ ಹಾಮಾನನು ಸಂತೋಷವುಳ್ಳವ ನಾಗಿಯೂ ಆನಂದ ಹೃದಯವುಳ್ಳವನಾಗಿಯೂ ಹೊರಟುಹೋದನು. ಆದರೆ ಅರಮನೆಯ ಬಾಗಲ ಲ್ಲಿರುವ ಮೊರ್ದೆಕೈ ತನಗೆ ಕದಲದೆ ಇರುವದನ್ನು ಹಾಮಾನನು ನೋಡಿದಾಗ ಅವನು ಮೊರ್ದೆಕೈಯ ಮೇಲೆ ಕೋಪದಿಂದ ತುಂಬಿದವನಾದನು.
ERVKN ಹಾಮಾನನು ಹರ್ಷ ತುಂಬಿದವನಾಗಿ ರಾಜ ಸನ್ನಿಧಿಯಿಂದ ತನ್ನ ಮನೆಗೆ ತೆರಳಿದನು. ಆದರೆ ಹೆಬ್ಬಾಗಿಲ ಬಳಿಯಲ್ಲಿ ಮೊರ್ದೆಕೈಯನ್ನು ನೋಡಿದಾಗ ಅವನ ಮೇಲೆ ಹಾಮಾನನ ಕೋಪ ಉಕ್ಕಿ ಬಂತು. ಯಾಕಂದರೆ ಮೊರ್ದೆಕೈ ಹಾಮಾನನಿಗೆ ಯಾವ ಗೌರವವನ್ನೂ ಕೊಟ್ಟಿರಲಿಲ್ಲ. ಮತ್ತು ಅವನಿಗೆ ಭಯಪಡಲಿಲ್ಲ. ಇದು ಹಾಮಾನನನ್ನು ಸಿಟ್ಟಿಗೇರುವಂತೆ ಮಾಡಿತು.