Versions
KNV ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಶೆಬ್ನನೂ ಯೋವನೂ ರಬ್ಷಾಕೆಗೆ--ನೀನು ದಯಮಾಡಿ ಅರಾಮ್ಯ ಭಾಷೆಯಲ್ಲಿ ನಿನ್ನ ಸೇವಕರ ಸಂಗಡ ಮಾತ ನಾಡು. ಅದು ನಮಗೆ ತಿಳಿಯುತ್ತದೆ; ಗೋಡೆಯ ಮೇಲಿರುವ ಜನರು ಕೇಳುವ ಹಾಗೆ ಯೆಹೂದ್ಯರ ಭಾಷೆಯಲ್ಲಿ ನಮ್ಮ ಸಂಗಡ ಮಾತನಾಡಬೇಡ ಅಂದರು.
ERVKN ನಂತರ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬುವರು ಸೇನಾಧಿಪತಿಗೆ, “ದಯವಿಟ್ಟು ನಮ್ಮೊಂದಿಗೆ ಅರಾಮ್ಯರ ಭಾಷೆಯಲ್ಲಿ ಮಾತನಾಡು. ನಾವು ಆ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಗೋಡೆಯ ಮೇಲಿರುವ ಜನರಿಗೆ ನಮ್ಮ ಮಾತುಗಳು ಕೇಳುವುದರಿಂದ ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ” ಎಂದು ಹೇಳಿದರು.