Versions
KNV ಇದಾದ ತರುವಾಯ ಮನಸ್ಸೆಯು ದಾವೀದನ ಪಟ್ಟಣದ ಹೊರಭಾಗದಲ್ಲಿ ಗೀಹೋನಿನ ಪಶ್ಚಿಮ ಕಡೆಯ ತಗ್ಗಿನಲ್ಲಿ ವಿಾನುಬಾಗಲ ದ್ವಾರದ ವರೆಗೆ ಓಫೆಲ್ ಸುತ್ತಲೂ ಗೋಡೆಯನ್ನು ಕಟ್ಟಿಸಿ ಅದನ್ನು ಬಹಳ ಎತ್ತರ ಮಾಡಿ ಯೆಹೂದದ ಸಮಸ್ತ ಕೋಟೆ ಯುಳ್ಳ ಪಟ್ಟಣಗಳಲ್ಲಿ ಸೈನ್ಯದ ಅಧಿಪತಿಗಳನ್ನು ಇಟ್ಟನು.
ERVKN ಇದಾದ ನಂತರ ಮನಸ್ಸೆಯು ದಾವೀದನಗರಕ್ಕೆ ಹೊರಗಿನ ಗೋಡೆಯನ್ನು ಕಟ್ಟಿಸಿದನು. ಈ ಗೋಡೆಯು ಕಿದ್ರೋನಿನಲ್ಲಿದ್ದ ಗೀಹೋನ್ ಬುಗ್ಗೆಯ ಪಶ್ಚಿಮ ದಿಕ್ಕಿನಿಂದ ಮೀನು ಬಾಗಿಲಿನ ಮುಂದೆ ಹೋಗಿ, ಅಲ್ಲಿಂದ ಓಫೆಲ್ ಗುಡ್ಡಕ್ಕೆ ಸುತ್ತು ಹಾಕಿತು. ಅವನು ಗೋಡೆಯನ್ನು ಬಹು ಎತ್ತರವಾಗಿ ಕಟ್ಟಿದನು. ಆಮೇಲೆ ಯೆಹೂದದಲ್ಲಿದ್ದ ಎಲ್ಲಾ ಕೋಟೆಗಳಲ್ಲಿ ಸೇನಾಪತಿಗಳನ್ನು ನೇಮಿಸಿದನು;