Versions
KNV ಉತ್ತರದ ಅರಸನು ಮತ್ತೆ ತಿರುಗಿಕೊಂಡು ಮೊದಲನೇ ಸಾರಿಗಿಂತಲೂ ದೊಡ್ಡ ಸಮೂಹವನ್ನು ನಿಲ್ಲಿಸಿ ಕೆಲವು ವರುಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ ಬಹಳ ಸಂಪತ್ತಿನ ಸಂಗಡವೂ ನಿಶ್ಚಯವಾಗಿ ಬರುವನು.
ERVKN ಉತ್ತರದ ರಾಜನು ಇನ್ನೊಂದು ಸೈನ್ಯವನ್ನು ತೆಗೆದುಕೊಂಡು ಬರುವನು. ಈ ಸೈನ್ಯವು ಮೊದಲಿನ ಸೈನ್ಯಕ್ಕಿಂತ ದೊಡ್ಡದಾಗಿರುವದು. ಬಹಳ ವರ್ಷಗಳ ತರುವಾಯ ಅವನು ಧಾಳಿಮಾಡುವನು. ಆ ಸೈನ್ಯವು ಬಹಳ ದೊಡ್ಡದಾಗಿದ್ದು ಹಲವಾರು ಆಯುಧಗಳಿಂದ ಸುಸಜ್ಜಿತವಾಗಿರುವದು. ಆ ಸೈನ್ಯವು ಯುದ್ಧಕ್ಕೆ ಸಿದ್ಧವಾಗಿರುವದು.