Bible Versions
Bible Books

2 Kings 18:26 (HCSB) Holman Christian Standard Bible

Versions

KNV   ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಶೆಬ್ನನೂ ಯೋವನೂ ರಬ್ಷಾಕೆಗೆ--ನೀನು ದಯಮಾಡಿ ಅರಾಮ್ಯ ಭಾಷೆಯಲ್ಲಿ ನಿನ್ನ ಸೇವಕರ ಸಂಗಡ ಮಾತ ನಾಡು. ಅದು ನಮಗೆ ತಿಳಿಯುತ್ತದೆ; ಗೋಡೆಯ ಮೇಲಿರುವ ಜನರು ಕೇಳುವ ಹಾಗೆ ಯೆಹೂದ್ಯರ ಭಾಷೆಯಲ್ಲಿ ನಮ್ಮ ಸಂಗಡ ಮಾತನಾಡಬೇಡ ಅಂದರು.
ERVKN   ನಂತರ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬುವರು ಸೇನಾಧಿಪತಿಗೆ, “ದಯವಿಟ್ಟು ನಮ್ಮೊಂದಿಗೆ ಅರಾಮ್ಯರ ಭಾಷೆಯಲ್ಲಿ ಮಾತನಾಡು. ನಾವು ಭಾಷೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಗೋಡೆಯ ಮೇಲಿರುವ ಜನರಿಗೆ ನಮ್ಮ ಮಾತುಗಳು ಕೇಳುವುದರಿಂದ ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ” ಎಂದು ಹೇಳಿದರು.
IRVKN   ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ, ಯೋವ ಎಂಬುವವರು ರಬ್ಷಾಕೆಗೆ, “ನೀನು ಮಾತನಾಡುವುದು ಪೌಳಿಗೋಡೆಯ ಮೇಲಿರುವ ಯೆಹೂದ್ಯರಿಗೂ ಕೇಳಿಸುತ್ತದೆ. ಆದುದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು, ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ § ಯೂದಾಯ ಭಾಷೆಯಲ್ಲಿ ಅಂದರೆ ಇಬ್ರಿಯ ಭಾಷೆಯಲ್ಲಿ. ಮಾತನಾಡಬೇಡ” ಎಂದು ಹೇಳಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us