Versions
KNV ಆದಾಗ್ಯೂ ಇಸ್ರಾಯೇಲಿನ ಮಕ್ಕಳ ಸಂಖ್ಯೆ ಅಳೆಯಲೂ ಲೆಕ್ಕಿಸಲೂ ಆಗದ ಸಮುದ್ರದ ಮರಳಿನ ಹಾಗೆ ಇರುವದು; ಮುಂದೆ ಇದಾದ ಮೇಲೆ--ನನ್ನ ಜನರಲ್ಲವೆಂದು ಅವರಿಗೆ ಹೇಳಿದ ಸ್ಥಳದಲ್ಲಿಯೇ ಜೀವವುಳ್ಳ ದೇವರ ಕುಮಾರರೆಂದು ಅವರಿಗೆ ಹೇಳುವರು.
ERVKN “ಇನ್ನು ಮುಂದೆ ಇಸ್ರೇಲರ ಜನಸಂಖ್ಯೆಯು ಸಮುದ್ರದ ಮರಳಿನಂತಿರುವದು. ನೀವು ಮರಳನ್ನು ಅಳತೆಮಾಡಲೂ ಅದನ್ನು ಲೆಕ್ಕಿಸಲೂ ಸಾಧ್ಯವಿಲ್ಲ. ಆಗ, ‘ನೀವು ನನ್ನ ಜನರಲ್ಲ’ ಎಂಬ ಹೇಳಿಕೆಯ ಬದಲಾಗಿ, ‘ನೀವು ಜೀವಸ್ವರೂಪನಾದ ದೇವರ ಮಕ್ಕಳು’ ಎಂಬುದಾಗಿ ಕರೆಯಲ್ಪಡುವಿರಿ.
IRVKN {ಇಸ್ರಾಯೇಲಿನ ಮುಂದಿನ ಸುಸ್ಥಿತಿ} PS ಇಸ್ರಾಯೇಲರ ಸಂಖ್ಯೆಯು ಅಳೆಯುವುದಕ್ಕೂ, ಲೆಕ್ಕಿಸುವುದಕ್ಕೂ ಅಸಾಧ್ಯವಾದ ಸಮುದ್ರತೀರದ ಮರಳಿನಂತಾಗುವುದು.
ಆಗ ಅವರು ನನ್ನ ಪ್ರಜೆಯಲ್ಲ ಎನಿಸಿಕೊಳ್ಳುವುದಕ್ಕೆ ಬದಲಾಗಿ ಜೀವಸ್ವರೂಪನಾದ ದೇವರ ಮಕ್ಕಳು ಎನಿಸಿಕೊಳ್ಳುವರು.