Versions
KNV ಹೀಗಿರಲಾಗಿ ನೀವು ಕೊಡುತ್ತೇವೆಂದು ಮೊದಲು ಹೇಳಿದ ಔದಾರ್ಯ ದ್ರವ್ಯವನ್ನು ಸಿದ್ಧಪಡಿಸಬೇಕೆಂದು ಈ ಸಹೋದರರು ಮುಂದಾಗಿ ನಿಮ್ಮ ಬಳಿಗೆ ಬಂದು ಅವರನ್ನು ಪ್ರೋತ್ಸಾಹಿಸುವದು ಅವಶ್ಯವೆಂದು ನನಗೆ ತೋಚಿತು, ಹೀಗೆ ಅದು ಸಂಕೋಚದಿಂದ ಬಾರದೆ ಔದಾರ್ಯವಾಗಿಯೇ ಸಿದ್ಧವಾಗುವದು.
ERVKN ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.
IRVKN ಹೀಗಿರಲಾಗಿ ಈ ಸಹೋದರರು ಮುಂಚಿತವಾಗಿ ನಿಮ್ಮ ಬಳಿಗೆ ಬಂದು ನೀವು ಮೊದಲೇ ವಾಗ್ದಾನಮಾಡಿದ ಕೊಡುಗೆಯನ್ನು ಸಿದ್ಧಪಡಿಸಲು ನಿಮಗೆ ಸಹಾಯಮಾಡುವಂತೆ ಇವರನ್ನು ಬೇಡಿಕೊಳ್ಳುವುದು ಅವಶ್ಯವೆಂದು ನನಗೆ ತೋಚಿತು. ಹೀಗೆ ಈ ದಾನ ಒತ್ತಾಯದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ದಾನ ಆಗಿರುತ್ತದೆ. PS