Versions
KNV ಸಭೆಯ ಹಿರಿಯನು ನಿಂದಾ ರಹಿತನೂ ಏಕಪತ್ನಿಯುಳ್ಳವನೂ ಆಗಿರಬೇಕು. ಅವನ ಮಕ್ಕಳು ನಂಬಿಗಸ್ತರಾಗಿರಬೇಕು; ಅವರು ದುರ್ಮಾರ್ಗ ಸ್ತರೆನಿಸಿ ಕೊಂಡವರಾಗಲಿ ಅಧಿಕಾರಕ್ಕೆ ಒಳಗಾಗದವ ರಾಗಲಿ ಆಗಿರಬಾರದು.
ERVKN ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು.
IRVKN † 1 ತಿಮೊ. 3:1-4 ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು.