Versions
KNV ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಅವರೆಲ್ಲರೂ ಹಳ್ಳ ಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ; ಸೆರೆಮನೆಗಳಲ್ಲಿ ಮುಚ್ಚಲ್ಪ ಟ್ಟಿದ್ದಾರೆ; ಅವರು ಸೂರೆಯಾದರೂ ತಪ್ಪಿಸುವವನು ಒಬ್ಬನೂ ಇಲ್ಲ, ಕೊಳ್ಳೆಯಾದದ್ದನ್ನು ತಿರಿಗಿ ಹಿಂದಕ್ಕೆ ಕೊಡು ಎಂದು ಹೇಳುವ ಒಬ್ಬನೂ ಇಲ್ಲ.
ERVKN ಆದರೆ, ಜನರನ್ನು ನೋಡಿರಿ. ಅವರನ್ನು ಬೇರೆಯವರು ಸೋಲಿಸಿದ್ದಾರೆ. ಅವರಿಂದ ವಸ್ತುಗಳನ್ನು ದೋಚಿದ್ದಾರೆ. ತರುಣರೆಲ್ಲರೂ ಭಯಪಟ್ಟಿದ್ದಾರೆ; ಅವರನ್ನು ಸೆರೆಮನೆಯಲ್ಲಿ ಬಂಧಿಸಿದ್ದಾರೆ. ಅವರಿಂದ ಹಣವನ್ನು ಜನರು ಕಿತ್ತುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಯಾರೂ ಇಲ್ಲ. ಅವರಲ್ಲಿ ಹಣವನ್ನು “ಹಿಂದಕ್ಕೆ ಕೊಡು” ಎಂದು ಹೇಳುವವರೇ ಇಲ್ಲ.
IRVKN ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಎಲ್ಲರೂ ಹಳ್ಳಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ, ಸೆರೆಮನೆಗಳಲ್ಲಿ ಮುಚ್ಚಲ್ಪಟ್ಟಿದ್ದಾರೆ.
ಅವರು ಸುಲಿಗೆಯಾಗಿದ್ದರೂ ಯಾರೂ ಬಿಡಿಸರು,
ಸೂರೆಯಾಗಿದ್ದರೂ ಯಾರೂ ಹಿಂದಕ್ಕೆ ಬಿಡು ಎನ್ನುವುದಿಲ್ಲ.