Versions
KNV ಇದಲ್ಲದೆ ದಾವೀದನೂ ಅವನ ಮಗ ನಾದ ಸೊಲೊಮೋನನೂ ಕೊಟ್ಟ ಆಜ್ಞೆಯ ಪ್ರಕಾರ ಹಾಡುಗಾರರೂ ದ್ವಾರಪಾಲಕರೂ ತಮ್ಮ ದೇವರ ಸೇವೆಯ ಸಂಬಂಧದಲ್ಲಿಯೂ ಶುದ್ಧೀಕರಣದ ಸಂಬ ಂಧದಲ್ಲಿಯೂ ತಮ್ಮ ಕೆಲಸಗಳನ್ನು ನಡಿಸುತ್ತಿದ್ದರು.
ERVKN ಯಾಜಕರೂ ಲೇವಿಯರೂ ತಮ್ಮ ದೇವರಿಗೋಸ್ಕರ ತಮ್ಮ ಕೆಲಸಗಳನ್ನು ಮಾಡಿದರು. ಶುದ್ಧೀಕರಣ ಆಚರಣೆಯ ಮೂಲಕ ಜನರನ್ನು ಶುದ್ಧರನ್ನಾಗಿ ಮಾಡಿದರು. ಗಾಯಕರೂ ದ್ವಾರಪಾಲಕರೂ ತಮ್ಮತಮ್ಮ ಕೆಲಸಗಳನ್ನು ಮಾಡಿದರು. ದಾವೀದನು ಮತ್ತು ಸೊಲೊಮೋನನು ಆಜ್ಞಾಪಿಸಿದ್ದ ಪ್ರಕಾರವೇ ಅವರು ಎಲ್ಲವನ್ನು ಮಾಡಿದರು.
IRVKN ಆ ಯಾಜಕರೂ ಲೇವಿಯರೂ ತಮ್ಮ ದೇವರ ಸೇವೆಯ ಸಂಬಧದಲ್ಲಿಯೂ ಶುದ್ಧೀಕರಣ ಸಂಬಂಧದಲ್ಲಿಯೂ ತಮ್ಮ ಕರ್ತವ್ಯವನ್ನು ಜಾಗರೂಕತೆಯಿಂದ ನೆರವೇರಿಸುತ್ತಿದ್ದರು. ಅವರಂತೆ ಗಾಯಕರೂ ದ್ವಾರಪಾಲಕರೂ ಸಹ ದಾವೀದನಿಂದಲೂ ಅವನ ಮಗನಾದ ಸೊಲೊಮೋನನಿಂದಲೂ ಸ್ಥಾಪಿತವಾದ ಕ್ರಮಾನುಸಾರವಾಗಿ ನಡೆಯುತ್ತಿದ್ದರು.