Versions
KNV ಆಗ ಅರಸನು ಹಾಮಾನನಿಗೆ--ನೀನು ಹೇಳಿದ ಪ್ರಕಾರವೇ ತ್ವರೆಮಾಡಿ ವಸ್ತ್ರವನ್ನೂ ಕುದುರೆಯನ್ನೂ ತಕ್ಕೊಂಡು ಅರಮನೆಯ ಬಾಗಲಲ್ಲಿ ಕುಳಿತಿರುವ ಯೆಹೂದ್ಯನಾದ ಮೊರ್ದೆಕೈಗೆ ಆ ಪ್ರಕಾರ ಮಾಡು. ನೀನು ಹೇಳಿದ್ದೆಲ್ಲಾದರಲ್ಲಿ ಒಂದಾದರೂ ತಪ್ಪಬಾರದು ಅಂದನು.
ERVKN “ಈಗಲೇ,” ಅರಸನು ಹಾಮಾನನಿಗೆ ಆಜ್ಞೆಕೊಟ್ಟು “ಈಗಲೇ ಹೋಗಿ ರಾಜವಸ್ತ್ರಗಳನ್ನೂ ರಾಜನ ಕುದುರೆಯನ್ನೂ ಕೊಂಡು ಹೋಗಿ ಯೆಹೂದ್ಯನಾದ ಮೊರ್ದೆಕೈಗೆ ನೀನು ಹೇಳಿದ ಪ್ರಕಾರವೆ ಮಾಡು. ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಂಡಿರುತ್ತಾನೆ. ನಿನ್ನ ಸಲಹೆಯಂತೆಯೇ ಎಲ್ಲವನ್ನೂ ಮಾಡು” ಅಂದನು.