Versions
KNV ಬೆಲ್ಶೆಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವದಕ್ಕೂ ಕಠಿಣವಾದ ಸಂಗತಿಗಳನ್ನು ತಿಳಿಸುವದಕ್ಕೂ ಮರ್ಮಗಳನ್ನು ಬಿಚ್ಚುವ ದಕ್ಕೂ ಉತ್ತಮ ಆತ್ಮವೂ ಜ್ಞಾನವೂ ವಿವೇಕವೂ ಸಿಕ್ಕಿ ದವು ಅಂದಳು. ಈಗ ಆ ದಾನಿಯೇಲನನ್ನು ಕರೆಯಿ ಸಿದರೆ ಅವನು ಈ ಬರಹದ ಅರ್ಥವನ್ನು ವಿವರಿಸುವನು ಅಂದಳು.
ERVKN ನಾನು ಹೇಳುತ್ತಿರುವ ಮನುಷ್ಯನ ಹೆಸರು ದಾನಿಯೇಲ. ರಾಜನು ಅವನಿಗೆ ಬೇಲ್ತೆಶಚ್ಚರನೆಂದು ಹೆಸರಿಟ್ಟಿದ್ದನು. ಬೇಲ್ತೆಶಚ್ಚರನು ಬಹಳ ಚಾಣಾಕ್ಷ ಮತ್ತು ಅನೇಕ ವಿಷಯಗಳನ್ನು ಬಲ್ಲವನು, ಅವನು ಕನಸುಗಳ ಅರ್ಥವನ್ನು ಹೇಳಬಲ್ಲನು, ರಹಸ್ಯಗಳನ್ನು ವಿವರಿಸಬಲ್ಲನು; ಕಠಿಣವಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲನು. ದಾನಿಯೇಲನನ್ನು ಕರೆಯಿಸು. ಅವನು ಗೋಡೆಯ ಮೇಲಿನ ಬರಹದ ಅರ್ಥವನ್ನು ನಿನಗೆ ಹೇಳುತ್ತಾನೆ” ಎಂದು ಹೇಳಿದಳು.
IRVKN ಹೌದು, ಬೇಲ್ತೆಶಚ್ಚರನೆಂಬ ಅಡ್ಡ ಹೆಸರನ್ನು ರಾಜನಿಂದ ಹೊಂದಿದ ಈ ದಾನಿಯೇಲನಲ್ಲಿ ಪರಮಬುದ್ಧಿಯೂ, ಜ್ಞಾನವೂ, ವಿವೇಕವೂ, ಕನಸುಗಳ ಅರ್ಥವನ್ನು ತಿಳಿಸುವ ಜಾಣತನವೂ, ಒಗಟುಬಿಡಿಸುವ ಚಮತ್ಕಾರವೂ, ಕಠಿಣವಾದ ಸಂಗತಿಗಳನ್ನು ತಿಳಿಸುವ ಚಾತುರ್ಯವೂ ತೋರಿಬಂದವು. ಆದುದರಿಂದಲೇ ಆತನನ್ನು ಹಾಗೆ ನೇಮಿಸಿದನು. ಈಗ ಆ ದಾನಿಯೇಲನನ್ನು ಕರೆಯಿಸಿದರೆ ಅವನು ಬರಹದ ಅರ್ಥವನ್ನು ವಿವರಿಸುವನು” ಎಂದಳು. PS