Versions
KNV ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ ದೇಶ ದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಕ್ಕಳು ಅವನ ಮುಂದೆ ಕುಳಿತಿರುವಾಗ ಅವನು ತನ್ನ ಸೇವಕನಿಗೆನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು ಪ್ರವಾದಿಗಳ ಮಕ್ಕಳಿಗೋಸ್ಕರ ಆಹಾರವನ್ನು ಬೇಯಿಸು ಅಂದನು.
ERVKN ಎಲೀಷನು ಗಿಲ್ಗಾಲಿಗೆ ಮತ್ತೆ ಬಂದನು. ಆಗ ಆ ದೇಶದಲ್ಲಿ ಬರಗಾಲವಿತ್ತು. ಪ್ರವಾದಿಗಳ ಗುಂಪು ಎಲೀಷನ ಎದುರಿನಲ್ಲಿ ಕುಳಿತಿದ್ದರು. ಎಲೀಷನು ತನ್ನ ಸೇವಕನಿಗೆ, “ಒಂದು ದೊಡ್ಡ ಪಾತ್ರೆಯನ್ನು ಒಲೆಯ ಮೇಲಿಟ್ಟು ಪ್ರವಾದಿಗಳ ಗುಂಪಿಗೆಲ್ಲ ಸಾರನ್ನು ಮಾಡು” ಎಂದು ಹೇಳಿದನು.
IRVKN {ತಿನ್ನಲು ಯೋಗ್ಯವಾಗುವಂತೆ ಊಟವನ್ನು ಮಾರ್ಪಡಿಸಿದ್ದು} PS ಎಲೀಷನು ತಿರುಗಿ ಗಿಲ್ಗಾಲಿಗೆ ಹೋದನು. ಆಗ ದೇಶದಲ್ಲಿ ಬರವಿದ್ದಿತು. ಪ್ರವಾದಿಮಂಡಳಿಯವರು ತನ್ನ ಮುಂದೆ ಒಟ್ಟಿಗೆ ಸೇರಿ ಬರಲು ಅವನು ತನ್ನ ಸೇವಕನಿಗೆ, “ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಇವರಿಗೋಸ್ಕರ ಅಡಿಗೆ ಮಾಡು” ಎಂದು ಆಜ್ಞಾಪಿಸಿದನು.