Versions
KNV ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ ಇಗೋ, ಕುದುರೆಗಳೂ ರಥಗಳುಳ್ಳ ಸೈನ್ಯವೂ ಪಟ್ಟಣವನ್ನು ಸುತ್ತಿಕೊಂಡಿತು. ಆಗ ಆ ಸೇವಕನು ಅವನಿಗೆ--ಅಯ್ಯೋ, ನನ್ನ ಯಜಮಾನನೇ, ನಾವು ಏನು ಮಾಡು ವದು ಅಂದನು.
ERVKN ಎಲೀಷನ ಸೇವಕನು ಹೊತ್ತಾರೆ ನಸುಕಿನಲ್ಲಿಯೆ ಮೇಲಕ್ಕೆದ್ದನು. ಸೇವಕನು ಹೊರಕ್ಕೆ ಹೋದಾಗ ರಥಗಳಿಂದ ಮತ್ತು ಕುದುರೆಗಳಿಂದ ಕೂಡಿದ ಸೈನ್ಯವು ನಗರವನ್ನು ಸುತ್ತುವರಿದಿರುವುದನ್ನು ನೋಡಿದನು! ಆ ಸೇವಕನು ಎಲೀಷನಿಗೆ, “ಅಯ್ಯೋ, ನನ್ನ ಒಡೆಯನೇ, ನಾವು ಈಗ ಏನು ಮಾಡೋಣ?” ಎಂದು ಕೇಳಿದನು.