Versions
KNV ನಾನು ನೋಡಿದ ತರುವಾಯ ಎದ್ದು ಶ್ರೇಷ್ಠರಿಗೂ ಅಧಿಕಾರ ಸ್ಥರಿಗೂ ಇತರ ಜನರಿಗೂ--ನೀವು ಅವರಿಗೋಸ್ಕರ ಭಯಪಡಬೇಡಿರಿ; ದೊಡ್ಡವನಾಗಿಯೂ ಭಯಂಕರ ನಾಗಿಯೂ ಇರುವ ಕರ್ತನನ್ನು ಜ್ಞಾಪಕಮಾಡಿ ಕೊಂಡು ನಿಮ್ಮ ಸಹೋದರರಿಗೋಸ್ಕರ, ಕುಮಾರ, ಕುಮಾರ್ತೆಯರಿಗೋಸ್ಕರ, ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ ಅಂದೆನು.
ERVKN ನಮಗೆದುರಾಗಿ ಬಂದಿದ್ದ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅವಲೋಕಿಸಿ ನಮ್ಮ ಜನರೊಂದಿಗೆ ಕುಟುಂಬ ಕುಟುಂಬವಾಗಿ, ಅಧಿಕಾರಿಗಳಿಗೆ, ಮತ್ತು ಉಳಿದ ಜನರಿಗೆ ಹೀಗೆ ಹೇಳಿದೆನು: “ನಮ್ಮ ವೈರಿಗಳ ಬಗ್ಗೆ ನೀವು ಏನೂ ಹೆದರಬೇಡಿರಿ. ನಮ್ಮ ದೇವರನ್ನು ನೆನಪು ಮಾಡಿರಿ. ಯೆಹೋವನು ಬಲಶಾಲಿಯೂ ಸರ್ವಶಕ್ತನೂ ಆಗಿದ್ದಾನೆ. ನೀವು ನಿಮ್ಮ ಸಹೋದರರಿಗಾಗಿ, ನಿಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ನಿಮ್ಮ ನಿಮ್ಮ ಹೆಂಡತಿಯರಿಗಾಗಿ ಮತ್ತು ಮನೆಗಳಿಗಾಗಿ ಹೋರಾಡಿರಿ.”
IRVKN ಆಗ ನಾನು ಅವರನ್ನು ಸಂದರ್ಶಿಸಿ ಅವರ ಮುಂದೆ ನಿಂತು ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಉಳಿದ ಜನರನ್ನೂ ಉದ್ದೇಶಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ, ಭಯಂಕರನೂ ಆಗಿರುವ ಕರ್ತನನ್ನು ನೆನಪುಮಾಡಿಕೊಂಡು ನಿಮ್ಮ ಸಹೋದರರಿಗಾಗಿಯೂ, ಗಂಡು ಹೆಣ್ಣು ಮಕ್ಕಳಿಗಾಗಿಯೂ, ಹೆಂಡತಿಯರಿಗಾಗಿಯೂ, ನಿಮ್ಮ ಮನೆಗಳಿಗೋಸ್ಕರವೂ ಹೋರಾಡಿರಿ” ಎಂದು ಹೇಳಿದೆನು.