Versions
KNV ಆಗ ಜೆಬುಲನು ಅವನಿಗೆ--ನಾವು ಅವನನ್ನು ಸೇವಿಸುವ ಹಾಗೆ ಅಬೀ ಮೆಲೆಕನು ಯಾರು ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನವಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧಮಾಡು ಅಂದನು.
ERVKN ಆಗ ಜೆಬುಲನು ಗಾಳನಿಗೆ, “ನೀನು ಈಗೇಕೆ ಬಡಾಯಿ ಕೊಚ್ಚುತ್ತಾ ಇಲ್ಲ? ‘ಅಬೀಮೆಲೆಕನು ಯಾರು? ನಾವು ಅವನ ಆಜ್ಞೆಯನ್ನು ಏಕೆ ಪಾಲಿಸಬೇಕು?’ ಎಂದು ನೀನು ಕೇಳಿದೆ. ನೀನು ಈ ಜನರನ್ನು ತಮಾಷೆಮಾಡಿದೆ. ಈಗ ಹೊರಗೆ ಹೋಗಿ ಅವರೊಂದಿಗೆ ಯುದ್ಧಮಾಡು” ಅಂದನು.
IRVKN ಆಗ ಜೆಬುಲನು ಅವನಿಗೆ, “ಈಗ ನಿನ್ನ ಬಾಯೆಲ್ಲಿದೆ? ಅಬೀಮೆಲೆಕನು ಎಷ್ಟರವನು? ನಾವು ಅವನನ್ನು ಯಾಕೆ ಸೇವಿಸಬೇಕು ಎಂದು ಕೊಚ್ಚಿಕೊಂಡಿಯಲ್ಲಾ; ಅವರು ನೀನು ತಿರಸ್ಕರಿಸಿದ ಜನರಲ್ಲವೋ? ಹಾಗಾದರೆ ಹೋಗಿ ಅವರೊಡನೆ ಯುದ್ಧಮಾಡು, ನೋಡೋಣ” ಎಂದು ಹೇಳಿದನು.