Versions
KNV ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ.
ERVKN ಜೆರುಸಲೇಮೇ, ನಿನ್ನ ಕೆಡವಲ್ಪಟ್ಟ ಕಟ್ಟಡಗಳು ಮತ್ತೆ ಸಂತೋಷಿಸುವವು. ನೀವೆಲ್ಲರೂ ಒಟ್ಟಾಗಿ ಹರ್ಷಿಸುವಿರಿ. ಯಾಕೆಂದರೆ ಯೆಹೋವನು ಜೆರುಸಲೇಮನ್ನು ಬಿಡಿಸಿ ತನ್ನ ಜನರನ್ನು ಸಂತೈಸುವನು.
IRVKN ಯೆರೂಸಲೇಮಿನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ!
ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ.