Versions
KNV ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನು ಎರಡನೇ ವರ್ಷದಲ್ಲಿ ಆದರಿಂದ ಮೊಳೆತದ್ದನ್ನು ತಿನ್ನುವಿರಿ. ಮೂರನೇ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ; ದ್ರಾಕ್ಷೇ ತೋಟವನ್ನು ನೆಟ್ಟು ಅವುಗಳ ಫಲವನ್ನು ತಿನ್ನುವದೇ ನಿಮಗೆ ಗುರುತಾಗಿ ರುವದು.
ERVKN ಆಗ ಯೆಹೋವನು ಹಿಜ್ಕೀಯನಿಗೆ, “ಈ ಮಾತುಗಳೆಲ್ಲಾ ಸತ್ಯವೆಂಬುದಕ್ಕೆ ನಿನಗೊಂದು ಗುರುತನ್ನು ಕೊಡುತ್ತೇನೆ. ಬೀಜ ಬಿತ್ತಲು ನಿನಗೆ ಸಾಧ್ಯವಿರಲಿಲ್ಲ. ಆದುದರಿಂದ ಈ ವರ್ಷದಲ್ಲಿ ಕೂಳೆಬೆಳೆಯನ್ನೂ ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ನೀನು ಊಟಮಾಡುವೆ. ಆದರೆ ಮೂರನೆಯ ವರ್ಷದಲ್ಲಿ ನೀನೇ ಬಿತ್ತಿದ ಬೀಜದಲ್ಲಿ ಬೆಳೆದ ಬೆಳೆಯನ್ನು ಊಟಮಾಡುವೆ. ಆ ಬೆಳೆಯಿಂದ ನಿನಗೆ ಬೇಕಾದಷ್ಟು ಆಹಾರ ಸಂಗ್ರಹವಾಗುವದು. ನೀನು ದ್ರಾಕ್ಷಾಲತೆಗಳನ್ನು ನೆಟ್ಟು ಅದರ ಫಲಗಳನ್ನು ತಿನ್ನುವೆ.
IRVKN ಈ ಮಾತುಗಳು ನೆರವೇರುವುದು ಎಂಬುದಕ್ಕೆ, ನೀವು ಈ ವರ್ಷದಲ್ಲಿ ಕೂಳೆಬೆಳೆಯನ್ನೂ, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದದ್ದನ್ನೂ, ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ ಕೂಡಿಸಿದ್ದನ್ನೂ ಅನುಭವಿಸುವುದೇ ಗುರುತಾಗಿರುವುದು.