Bible Versions
Bible Books

Daniel 7:9 (ASV) American Standard Version

Versions

KNV   ನಾನು ನೋಡುತ್ತಿದ್ದ ಹಾಗೆಯೇ ಸಿಂಹಾಸನಗಳು ಹಾಕಲ್ಪಟ್ಟು ಅದರ ಮೇಲೆ ಪೂರ್ವಿಕನೊಬ್ಬನು ಕುಳಿತುಕೊಂಡನು. ಆತನ ವಸ್ತ್ರವು ಹಿಮದಂತೆ ಬಿಳುಪಾಗಿಯೂ ಆತನ ತಲೆಕೂದಲು ಶುದ್ಧ ಉಣ್ಣೆಯಂತೆಯೂ ಆತನ ಸಿಂಹಾಸನವು ಅಗ್ನಿಜ್ವಾಲೆಯಂತೆಯೂ ಆತನ ಚಕ್ರಗಳು ಉರಿಯುವ ಬೆಂಕಿಯಂತೆಯೂ ಇದ್ದವು.
ERVKN   “ನಾನು ನೋಡುತ್ತಿದ್ದಂತೆಯೇ, ಆಸನಗಳನ್ನು ಅವುಗಳ ಸ್ಥಳದಲ್ಲಿ ಹಾಕಲಾಯಿತು. ಪುರಾತನ ರಾಜನು ತನ್ನ ಆಸನದ ಮೇಲೆ ಕುಳಿತುಕೊಂಡನು. ಆತನ ಉಡುಪು ಬಹಳ ಶುಭ್ರವಾಗಿತ್ತು. ಅದು ಹಿಮದಂತೆ ಶುಭ್ರವಾಗಿತ್ತು. ಆತನ ತಲೆಯ ಕೂದಲು ಶುಭ್ರವಾಗಿತ್ತು. ಅದು ಬಿಳಿಯ ಉಣ್ಣೆಯಂತೆ ಶುಭ್ರವಾಗಿತ್ತು. ಆತನ ಆಸನವು ಬೆಂಕಿಯಿಂದ ಮಾಡಲಾಗಿತ್ತು. ಅದರ ಚಕ್ರಗಳು ಬೆಂಕಿಯ ಜ್ವಾಲೆಗಳಿಂದ ಮಾಡಲಾಗಿದ್ದವು.
IRVKN   “ನಾನು ನೋಡುತ್ತಿದ್ದ ಹಾಗೆ ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು * ಮಹಾವೃದ್ಧನೊಬ್ಬನು ದೇವರು. ಆಸೀನನಾದನು; ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು. ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು, ಆತನ ನ್ಯಾಯಾಸನವು ಅಗ್ನಿಜ್ವಾಲೆಗಳು, ಅದರ ಚಕ್ರಗಳು ಧಗಧಗಿಸುವ ಬೆಂಕಿಯೇ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us