Versions
KNV ಯೋವಾಬನು ಅವನಿಗೆ--ನೀನು ಈ ಹೊತ್ತು ವರ್ತಮಾನ ತಕ್ಕೊಂಡು ಹೋಗಬೇಡ; ಮತ್ತೊಂದು ದಿವಸ ವರ್ತಮಾನ ತಕ್ಕೊಂಡು ಹೋಗ ಬಹುದು. ಅರಸನ ಮಗನು ಸತ್ತದ್ದರಿಂದ ಈ ಹೊತ್ತು ನೀನು ವರ್ತಮಾನ ತಕ್ಕೊಂಡು ಹೋಗ ಬೇಡ ಅಂದನು.
ERVKN ಯೋವಾಬನು ಅಹೀಮಾಚನಿಗೆ, “ಇಲ್ಲ, ದಾವೀದನಿಗೆ ಇಂದು ನೀನು ಈ ವರ್ತಮಾನವನ್ನು ತಿಳಿಸುವಂತಿಲ್ಲ. ನೀನು ಬೇರೊಂದು ದಿನದಲ್ಲಿ ವರ್ತಮಾನವನ್ನು ತಿಳಿಸಬಹುದು, ಏಕೆಂದರೆ ಇಂದು ರಾಜನ ಮಗನು ಸತ್ತಿದ್ದಾನೆ” ಎಂದು ಉತ್ತರಿಸಿದನು.
IRVKN ಯೋವಾಬನು ಅವನಿಗೆ, “ಈ ಹೊತ್ತಿನ ಸುದ್ದಿಯನ್ನು ತೆಗೆದುಕೊಂಡು ಹೋಗತಕ್ಕವನು ನೀನಲ್ಲ. ಇನ್ನೊಂದು ಸಾರಿ ನಿನ್ನನ್ನು ಕಳುಹಿಸುತ್ತೇನೆ, ಈ ಹೊತ್ತು ಅರಸನ ಮಗನು ಸತ್ತಿರುವುದರಿಂದ ವರ್ತಮಾನವು ಶುಭವಾದುದಲ್ಲ” ಎಂದು ಹೇಳಿದನು.