Versions
KNV ಇದಲ್ಲದೆ ಪಟ್ಟಣದೊಳಗಿಂದ ಯುದ್ಧಸ್ಥರ ಮೇಲಿದ್ದ ಒಬ್ಬ ಅಧಿ ಕಾರಿಯನ್ನೂ ಪಟ್ಟಣದಲ್ಲಿ ಸಿಕ್ಕಿದ ಅರಸನ ಸಮ್ಮುಖ ದಲ್ಲಿದ್ದ ಐದು ಮಂದಿಯನ್ನೂ ದೇಶದ ಜನರನ್ನೂ ಸೈನ್ಯದ ತರಬೇತು ಮಾಡಿದ ಪ್ರಧಾನನ ಲೇಖಕನೂ ಪಟ್ಟಣದಲ್ಲಿ ಸಿಕ್ಕಿದ ದೇಶದ ಜನರಾದ ಅರವತ್ತು ಮಂದಿಯನ್ನೂ ಅವನು ಹಿಡಿದನು.
ERVKN ನೆಬೂಜರದಾನನು ಸೇನೆಯ ಸೇನಾಧಿಕಾರಿಯೊಬ್ಬನನ್ನು ಹಿಡಿದುಕೊಂಡು ಹೋದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ರಾಜನ ಐದು ಮಂದಿ ಸಲಹೆಗಾರರನ್ನು ಹಿಡಿದೊಯ್ದನು. ಅವನು ಸೇನೆಯ ಅಧಿಕಾರಿಯ ಕಾರ್ಯದರ್ಶಿಯನ್ನು ಹಿಡಿದೊಯ್ದನು. ಸೇನಾಧಿಕಾರಿಯ ಕಾರ್ಯದರ್ಶಿಯು ಸಾಮಾನ್ಯ ಜನರನ್ನು ಒಟ್ಟುಗೂಡಿಸಿ, ಅವರನ್ನು ಸೈನಿಕರನ್ನಾಗಿ ಆರಿಸುತ್ತಿದ್ದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ಇತರ ಅರವತ್ತು ಮಂದಿಯನ್ನು ಹಿಡಿದೊಯ್ದನು. ಈ ಜನರು ಸಾಮಾನ್ಯ ಜನರಾಗಿದ್ದರು.
IRVKN ಸೈನ್ಯ ಸಂಬಂಧವಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದ ಕಂಚುಕಿ, ಪಟ್ಟಣದಲ್ಲಿ ಉಳಿದಿದ್ದ ಅರಸನಿಗೆ ಆಪ್ತರಾಗಿದ್ದ ಐದು ಮಂದಿ ಮಂತ್ರಿಗಳು, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಯನ್ನು ಮಾಡುವ ಸೇನಾಧಿಪತಿಯ ಲೇಖಕನು, ಪಟ್ಟಣದಲ್ಲಿದ್ದ ಅರುವತ್ತು ಮಂದಿ ಜನರೂ ಇದ್ದರು.