Versions
KNV ಆಗ ಅರಸನೂ ಯೆಹೋಯಾದನೂ ಅದನ್ನು ಕರ್ತನ ಆಲಯದ ಸೇವೆಯ ಕಾರ್ಯವನ್ನು ಮಾಡುವ ವರಿಗೆ ಕೊಟ್ಟು ಅವರಿಂದ ಮಾಡಿಸಿದನು. ಕರ್ತನ ಆಲಯವನ್ನು ದುರಸ್ತು ಪಡಿಸುವ ನಿಮಿತ್ತ ಕಲ್ಲು ಕಡಿಯುವವರನ್ನೂ ಬಡಿಗಿಯವರನ್ನೂ ಕೂಲಿಗೆ ಕರ ಕೊಂಡರು. ಕರ್ತನ ಆಲಯವನ್ನು ಭದ್ರಮಾಡುವ ನಿಮಿತ್ತ ಕಬ್ಬಿಣ ಹಿತ್ತಾಳೆ ಕೆಲಸ ಮಾಡುವವರನ್ನು ಕೂಲಿಗೆ ಕರಕೊಂಡರು.
ERVKN ಯೆಹೋಯಾದನು ಮತ್ತು ರಾಜನು ದೇವಾಲಯವನ್ನು ದುರಸ್ತಿ ಮಾಡುವವರ ಕೈಗೆ ಅದನ್ನು ಕೊಟ್ಟರು. ಅವರು ಮರದ ಕುಶಲಕರ್ಮಿಗಳನ್ನೂ ಬಡಗಿಗಳನ್ನೂ ದೇವಾಲಯವನ್ನು ಸರಿಪಡಿಸಲು ನೇಮಿಸಿದರು. ಅಲ್ಲದೆ ತಾಮ್ರ ಕಬ್ಬಿಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೂ ಕೆಲಸಕ್ಕೆ ನೇಮಿಸಿದರು.
IRVKN ಅರಸನೂ ಯೆಹೋಯಾದನೂ ಅದನ್ನು ಯೆಹೋವನ ಆಲಯದ ಕೆಲಸವನ್ನು ನಡೆಸುವವರಿಗೆ ಒಪ್ಪಿಸಿದರು. ಅವರು ಯೆಹೋವನ ಆಲಯದ ಜೀರ್ಣೋದ್ಧಾರಕ್ಕಾಗಿ ಶಿಲ್ಪಿಗಳನ್ನೂ, ಬಡಗಿಯರನ್ನೂ, ಅದನ್ನು ಭದ್ರಪಡಿಸುವುದಕ್ಕಾಗಿ ಕಮ್ಮಾರರನ್ನೂ, ಕಂಚುಗಾರರನ್ನೂ ಕೆಲಸಕ್ಕೆ ನೇಮಿಸಿದರು.