Versions
KNV ಅವರು ಅದರಿಂದ ಮರು ದಿವಸಕ್ಕೆ ಏನೂ ಉಳಿಸಬಾರದು; ಅದರಲ್ಲಿ ಒಂದು ಎಲುಬನ್ನಾದರೂ ಮುರಿಯಬಾರದು; ಪಸ್ಕದ ಸಮಸ್ತ ಕಟ್ಟಳೆ ಪ್ರಕಾರವಾಗಿ ಅದನ್ನು ಆಚರಿಸಬೇಕು.
ERVKN ಅದರಲ್ಲಿ ಯಾವುದನ್ನೂ ಮರುದಿನದವರೆಗೆ ಇಡಬಾರದು. ಅವರು ಅದೆಲ್ಲವನ್ನು ತಿಂದುಬಿಡಬೇಕು. ಆ ಕುರಿಮರಿಯ ಎಲುಬುಗಳನ್ನು ಮುರಿಯಬಾರದು. ಅವರು ಪಸ್ಕಹಬ್ಬದ ವಿಷಯವಾಗಿ ನೇಮಕವಾಗಿರುವ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು.
IRVKN ಅದರಲ್ಲಿ ಸ್ವಲ್ಪವನ್ನಾದರೂ ಮರುದಿನದವರೆಗೆ ಉಳಿಸಬಾರದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಬಾರದು. ಅಂತೂ ಪಸ್ಕಹಬ್ಬದ ವಿಷಯವಾಗಿರುವ ವಿಧಿನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು.