Versions
KNV ಆದದರಿಂದ ಕರ್ತನು ಹೇಳುವದೇ ನಂದರೆ--ನಿನ್ನ ಹೆಂಡತಿ ಪಟ್ಟಣದಲ್ಲಿ ಸೂಳೆಯಾಗು ವಳು; ನಿನ್ನ ಕುಮಾರರೂ ಕುಮಾರ್ತೆಯರೂ ಕತ್ತಿ ಯಿಂದ ಬೀಳುವರು; ನಿನ್ನ ದೇಶವು ನೂಲಿನಿಂದ ವಿಭಾಗಿಸಲ್ಪಡುವದು; ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು.
ERVKN ಆದರೆ ದೇವರಾದ ಯೆಹೋವನು ಹೇಳುವದೇನೆಂದರೆ, ‘ನಿನ್ನ ಹೆಂಡತಿಯು ಪಟ್ಟಣದೊಳಗೆ ವೇಶ್ಯೆಯಾಗುವಳು. ನಿನ್ನ ಗಂಡು, ಹೆಣ್ಣುಮಕ್ಕಳು ಕತ್ತಿಯಿಂದ ಸಾಯುವರು. ಅನ್ಯರು ನಿನ್ನ ದೇಶವನ್ನು ಕಿತ್ತುಕೊಂಡು ತಮ್ಮೊಳಗೆ ಹಂಚಿಕೊಳ್ಳುವರು. ಮತ್ತು ನೀನು ಪರದೇಶದಲ್ಲಿ ಸಾಯುವಿ. ಇಸ್ರೇಲಿನ ಜನರು ಖಂಡಿತವಾಗಿಯೂ ಸೆರೆಹಿಡಿಯಲ್ಪಟ್ಟು ತಮ್ಮ ದೇಶದಿಂದ ಒಯ್ಯಲ್ಪಡುವರು.’“
IRVKN ‘ನಿನ್ನ ಹೆಂಡತಿಯು ಈ ಪಟ್ಟಣದಲ್ಲಿ ಸೂಳೆಯಾಗುವಳು;
ನಿನ್ನ ಗಂಡು ಮತ್ತು ಹೆಣ್ಣು ಮಕ್ಕಳು ಖಡ್ಗದಿಂದ ಹತರಾಗುವರು;
ನಿನ್ನ ದೇಶವನ್ನು ಶತ್ರುಗಳು ನೂಲಿನಿಂದ ವಿಭಾಗಿಸಿಕೊಳ್ಳುವರು;
ನೀನಂತೂ ಅಜ್ಞಾತವಾದ ‡ ಅಜ್ಞಾತವಾದ ಅಥವಾ ಅಪವಿತ್ರವಾದ ದೇಶದಲ್ಲಿ ಸಾಯುವಿ,
ಇಸ್ರಾಯೇಲರು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವುದು ಖಂಡಿತ’ ” ಎಂಬುದಾಗಿ ಯೆಹೋವನು ಹೇಳಿದನು. PE