Versions
KNV ಪ್ರವಾದಿಯು ಕರ್ತನ ಹೆಸರಿನಲ್ಲಿ ಹೇಳಿದ ಮೇಲೆ ಆಗದೆ ಇಲ್ಲವೆ ಸಂಭವಿಸದೆ ಹೋದರೆ ಅದೇ ಕರ್ತನು ಹೇಳದಂಥ, ಮಾತನಾಡದಂಥ ಕಾರ್ಯವು; ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ ಅವನಿಗೆ ಭಯಪಡಬಾರದು.
ERVKN ಒಬ್ಬ ಪ್ರವಾದಿಯು ತಾನು ಯೆಹೋವನಿಂದ ಕಳುಹಿಸಲ್ಪಟ್ಟವನು ಎಂದು ಹೇಳಿಕೊಂಡರೆ ಮತ್ತು ಅವನು ಹೇಳಿದ ಮಾತುಗಳು ನೆರವೇರದೆ ಹೋದರೆ ಆಗ ಆ ವಿಷಯಗಳನ್ನು ಯೆಹೋವನು ಹೇಳಲಿಲ್ಲವೆಂದು ನಿಮಗೆ ಗೊತ್ತಾಗುವುದು. ಆ ಪ್ರವಾದಿಯು ತನ್ನದೆ ಆದ ಆಲೋಚನೆಯನ್ನು ನಿಮಗೆ ಹೇಳುತ್ತಿದ್ದಾನೆಂದು ನಿಮಗೆ ತಿಳಿಯುವುದು. ನೀವು ಅವನಿಗೆ ಭಯಪಡಬೇಡಿರಿ.