Versions
KNV ಕರ್ತನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು--ನಾನು ನಿಮ್ಮನ್ನು ಐಗುಪ್ತ ದಿಂದ ಬರಮಾಡಿ ನಿಮ್ಮ ತಂದೆಗಳಿಗೆ ಆಣೆಯಿಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು.
ERVKN ಯೆಹೋವನ ದೂತನು ಗಿಲ್ಗಾಲ್ ನಗರದಿಂದ ಬೋಕೀಮ್ ನಗರದವರೆಗೆ ಹೋದನು. ಆ ದೂತನು ಇಸ್ರೇಲರಿಗೆ ಯೆಹೋವನ ಒಂದು ಸಂದೇಶವನ್ನು ತಿಳಿಸಿದನು. ಆ ಸಂದೇಶವು ಹೀಗೆದೆ: “ನಾನು ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ಹೊರಗೆತಂದೆ. ನಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರದೇಶಕ್ಕೆ ನಿಮ್ಮನ್ನು ಕರೆದುಕೊಂಡು ಬಂದೆನು. ‘ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದಿಗೂ ಮುರಿಯುವುದಿಲ್ಲ.