Versions
KNV ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ.
ERVKN “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ. ಆರಾಧಿಸಲು ಕೆತ್ತಿದ ವಿಗ್ರಹಗಳನ್ನಾಗಲಿ ಕಲ್ಲುಕಂಬಗಳನ್ನಾಗಲಿ ನಿಮ್ಮ ದೇಶದಲ್ಲಿ ಸ್ಥಾಪಿಸಬೇಡಿರಿ. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು!
IRVKN {ವಿಗ್ರಹಾರಾಧನೆಯನ್ನು ಮಾಡಬಾರದೆಂಬ ನಿಯಮ} PS “ನೀವು ವಿಗ್ರಹಗಳನ್ನು ಮಾಡಿಸಿಕೊಳ್ಳಬಾರದು; ಕೆತ್ತಿದ ಪ್ರತಿಮೆಯನ್ನಾಗಲಿ ಅಥವಾ ಕಲ್ಲು ಕಂಬವನ್ನಾಗಲಿ ನಿಲ್ಲಿಸಿಕೊಳ್ಳಬಾರದು; ಅಡ್ಡಬೀಳುವುದಕ್ಕಾಗಿ ವಿಚಿತ್ರವಾಗಿ ಕೆತ್ತಿದ ಕಲ್ಲುಗಳನ್ನು ನಿಮ್ಮ ದೇಶದಲ್ಲಿ ಇಡಬಾರದು; ನಾನೇ ಯೆಹೋವನೆಂಬ ನಿಮ್ಮ ದೇವರು.