Bible Language

Nehemiah 3 (YLT) Young's Literal Translation

Versions

KNV   ಆಗ ಪ್ರಧಾನ ಯಾಜಕನಾದ ಎಲ್ಯಾಷೀಬನೂ ಅವನ ಸಹೋದರರಾದ ಯಾಜಕರೂ ಎದ್ದು ಕುರಿ ಬಾಗಲನ್ನು ಕಟ್ಟಿದರು. ಇವರು ಅದನ್ನು ಪರಿಶುದ್ಧ ಮಾಡಿ ಅದರ ಬಾಗಲುಗಳನ್ನು ನಿಲ್ಲಿಸಿದರು. ಹಮ್ಮೆಯದ ಗೋಪುರದ ಮಟ್ಟಿಗೂ ಹನನೇಲನ ಗೋಪುರದ ವರೆಗೂ ಅದನ್ನು ಪರಿಶುದ್ಧ ಮಾಡಿದರು.
ERVKN   ಎಲ್ಯಾಷೀಬನು ಮಹಾಯಾಜಕನಾಗಿದ್ದನು. ಅವನೂ ಮತ್ತು ಯಾಜಕರುಗಳಾಗಿದ್ದ ಅವನ ಸಹೋದರರೂ ಕುರಿ ಹೆಬ್ಬಾಗಿಲನ್ನು ಕಟ್ಟಿದರು. ನಂತರ ಪ್ರಾರ್ಥಿಸಿ ಯೆಹೋವನಿಗೆ ಅದನ್ನು ಪ್ರತಿಷ್ಠಿಸಿದರು. ಅವರು ಅದಕ್ಕೆ ಬಾಗಿಲುಗಳನ್ನು ಜೋಡಿಸಿದರು. ಯಾಜಕರು ನೂರುಗೋಪುರ ಮತ್ತು ಹನನೇಲ್ ಗೋಪುರದವರೆಗೂ ಜೆರುಸಲೇಮಿನ ಗೋಡೆಯನ್ನು ಕಟ್ಟಿದ್ದರು. ಅವರು ಪ್ರಾರ್ಥಿಸಿ ಯೆಹೋವನಿಗೆ ಪ್ರತಿಷ್ಠಿಸಿದರು.