Bible Language

Ezra 8:15 (WEB) World English Bible

Versions

KNV   ಇವರನ್ನು ನಾನು ಅಹಾವಕ್ಕೆ ಹರಿಯುವ ನದಿಯ ಬಳಿಯಲ್ಲಿ ಕೂಡಿಸಿಕೊಂಡು ಅಲ್ಲಿ ಮೂರು ದಿವಸ ಡೇರೆಗಳಲ್ಲಿ ವಾಸಿಸಿದ್ದೆವು. ನಾನು ಜನರನ್ನೂ ಯಾಜಕ ರನ್ನೂ ಶೋಧಿಸಿ ನೋಡುವಾಗ ಲೇವಿಯರ ಕುಮಾರ ರಲ್ಲಿ ಒಬ್ಬನೂ ಅಲ್ಲಿ ಸಿಕ್ಕಲಿಲ್ಲ.
ERVKN   ಎಜ್ರನಾದ ನಾನು ಅಹವಾ ಕಡೆಗೆ ಹರಿಯುವ ನದಿಯ ಬಳಿಗೆ ಬರುವಂತೆ ಮೇಲಿನ ಎಲ್ಲಾ ಜನರಿಗೆ ಹೇಳಿದೆ. ಸ್ಥಳದಲ್ಲಿ ನಾವು ಮೂರು ದಿನ ಇದ್ದೆವು. ಗುಂಪಿನಲ್ಲಿ ಯಾಜಕರೂ ಇದ್ದರು ಎಂದು ನಮಗೆ ತಿಳಿದುಬಂತು. ಆದರೆ ಲೇವಿಯರು ಅವರಲ್ಲಿ ಇರಲಿಲ್ಲ.
IRVKN   ಅಹವಾ ಪ್ರಾಂತ್ಯದ ಕಡೆಗೆ ಹರಿಯುವ ನದಿಯ ಬಳಿಯಲ್ಲಿ ನಾನು ಇವರನ್ನು ಕೂಡಿಸಿದೆನು. ಅಲ್ಲಿ ಮೂರು ದಿನ ಪಾಳೆಯಮಾಡಿಕೂಂಡ ಮೇಲೆ ಸಾಧಾರಣ ಜನರೂ, ಯಾಜಕರೂ ಬಂದಿದ್ದಾರೆ, ಲೇವಿಯರಲ್ಲಿ ಯಾರೂ ಬರಲಿಲ್ಲ ಎಂದು ಕಂಡುಬಂತು.