Bible Language

Titus 1:7 (TITUS_1_1)

Versions

KNV   ಯಾಕಂದರೆ ಸಭಾಧ್ಯಕ್ಷನು ದೇವರ ಮನೆವಾರ್ತೆಯವನಾಗಿರುವದರಿಂದ ನಿಂದಾ ರಹಿತನಾಗಿರಬೇಕು; ಅವನು ಸ್ವೇಚ್ಛಾಪರನೂ ಮುಂಗೋಪಿಯೂ ಕುಡಿಯುವವನೂ ಹೊಡೆದಾಡು ವವನೂ ನೀಚಲಾಭವನ್ನು ಅಪೇಕ್ಷಿಸುವವನೂ ಆಗಿರದೆ
ERVKN   ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು.