Versions
KNV ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ; ನೀನು ನನಗೆ ಸಹಾಯಕನಾಗಿದ್ದೀ; ನನ್ನನ್ನು ವಿಸರ್ಜಿಸಬೇಡ; ನನ್ನ ರಕ್ಷಣೆಯ ಓ ದೇವರೇ, ನನ್ನನ್ನು ಬಿಟ್ಟುಬಿಡಬೇಡ.
ERVKN ಯೆಹೋವನೇ, ನನಗೆ ವಿಮುಖನಾಗಬೇಡ: ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ. ನನ್ನ ದೇವರೇ, ನನ್ನ ರಕ್ಷಕನು ನೀನೇ. ನನ್ನನ್ನು ಕೈ ಬಿಡಬೇಡ! ತೊರೆದು ಬಿಡಬೇಡ!
IRVKN ನನಗೆ ವಿಮುಖನಾಗಿರಬೇಡ;
ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ.
ನೀನು ನನಗೆ ಸಹಾಯಕನಾಗಿಯೇ ಇದ್ದೆಯಲ್ಲವೇ;
ನನ್ನನ್ನು ರಕ್ಷಿಸಿದ ದೇವರೇ, ಕೈಬಿಡಬೇಡ, ತೊರೆದುಬಿಡಬೇಡ.