Bible Language

Daniel 8:3 (NLV) New Life Verson

Versions

KNV   ಆಗ ನಾನು ಕಣ್ಣೆತ್ತಿ ನೋಡಿದಾಗ ಇಗೋ, ನದಿಯ ಮುಂದೆ ಎರಡು ಕೊಂಬುಗಳುಳ್ಳ ಒಂದು ಟಗರು ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ಉದ್ದವಾಗಿತ್ತು. ದೊಡ್ಡ ಕೊಂಬು, ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು.
ERVKN   ನಾನು ಕಣ್ಣೆತ್ತಿ ನೋಡಲಾಗಿ ಊಲಾ ನದಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಟಗರೊಂದು ನನ್ನ ಕಣ್ಣಿಗೆ ಬಿತ್ತು. ಟಗರಿಗೆ ಎರಡು ಉದ್ದವಾದ ಕೊಂಬುಗಳಿದ್ದವು. ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದು ಕೊಂಬು ಇನ್ನೊಂದು ಕೊಂಬಿಗಿಂತ ಉದ್ದವಾಗಿತ್ತು. ಉದ್ದವಾದ ಕೊಂಬು ಇನ್ನೊಂದು ಕೊಂಬಿಗಿಂತ ಹಿಂದಕ್ಕೆ ಇತ್ತು.
IRVKN   ನಾನು ಕಣ್ಣೆತ್ತಿ ನೋಡಲು ಇಗೋ, ಎರಡು ಕೊಂಬಿನ ಒಂದು ಟಗರು ಕಾಲುವೆಯ ಹತ್ತಿರ ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ದೊಡ್ಡದಾಗಿತ್ತು. ದೊಡ್ಡದು ಮೊಳೆತದ್ದು ಚಿಕ್ಕ ಕೊಂಬು ಮೊಳೆತ ಮೇಲೆ.