Bible Language

Judges 19 (NLV) New Life Verson

Versions

KNV   ಇಸ್ರಾಯೇಲಿನಲ್ಲಿ ಅರಸನಿಲ್ಲದ ದಿವಸಗಳಲ್ಲಿ ಆದದ್ದೇನಂದರೆ, ಎಫ್ರಾಯಾಮ್‌ ಬೆಟ್ಟದ ಪಾರ್ಶ್ವದಲ್ಲಿ ಒಬ್ಬ ಲೇವಿಯನು ಪ್ರವಾ ಸಿಯಾಗಿದ್ದನು.
ERVKN   ಆಗಿನ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿ ಒಬ್ಬ ಲೇವಿಯು ವಾಸಮಾಡುತ್ತಿದ್ದನು. ಮನುಷ್ಯನಿಗೆ ಒಬ್ಬ ಉಪಪತ್ನಿ ಇದ್ದಳು. ಅವಳು ಯೆಹೂದದ ಬೇತ್ಲೆಹೇಮಿನವಳಾಗಿದ್ದಳು.
IRVKN   {ಗಿಬೆಯದವರ ಕ್ರೂರಕೃತ್ಯ} PS ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ಎಫ್ರಾಯೀಮ್ ಪರ್ವತಪ್ರದೇಶದ ಒಂದು ದೂರ ಸ್ಥಳದಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಯೆಹೂದದ ಬೇತ್ಲೆಹೇಮಿನವಳಾದ ಒಬ್ಬ ಸ್ತ್ರೀಯು ಅವನಿಗೆ ಉಪಪತ್ನಿಯಾಗಿದ್ದಳು.