Bible Language

Isaiah 30:6 (NASU) New American Standard Bible (Updated)

Versions

KNV   ದಕ್ಷಿಣ ಸೀಮೆಯ ಮೃಗಗಳ ವಿಷಯವಾದ ದೈವೋಕ್ತಿ. ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿ ಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿ ಗಳ ಬೆನ್ನುಗಳ ಮೇಲೆ ತಮ್ಮ ಬದುಕನ್ನೂ ಒಂಟೆಗಳ ಡಬ್ಬಗಳ ಮೇಲೆ ತಮ್ಮ ದ್ರವ್ಯಗಳನ್ನೂ ಪ್ರಯೋಜನ ವಲ್ಲದ ಜನಕ್ಕೆ ತಕ್ಕೊಂಡು ಹೋಗುತ್ತಾರೆ.
ERVKN   ನೆಗೆವ್‌ನಲ್ಲಿರುವ ಪ್ರಾಣಿಗಳ ದುಃಖಕರವಾದ ಸಂದೇಶ: ನೆಗೆವ್ ಬಹು ಅಪಾಯಕಾರಿ ಸ್ಥಳ. ಸಿಂಹ, ವಿಷದ ಹಾವುಗಳು, ವೇಗವಾಗಿ ಚಲಿಸುವ ಹಾವುಗಳಿಂದ ಅದು ತುಂಬಿದೆ. ಆದರೆ ಕೆಲವರು ನೆಗೆವ್ ಮೂಲಕ ಪ್ರಯಾಣ ಮಾಡಿ ಈಜಿಪ್ಟಿಗೆ ಹೋಗುತ್ತಾರೆ. ಅವರು ತಮ್ಮ ಸಂಪತ್ತನ್ನೆಲ್ಲಾ ಕತ್ತೆಯ ಮೇಲೆ ಹೊರಿಸಿರುತ್ತಾರೆ. ಅವರು ತಮ್ಮ ಧನವನ್ನು ಒಂಟೆಯ ಮೇಲೆ ಹೊರಿಸಿರುತ್ತಾರೆ. ತಮಗೆ ಸಹಾಯ ಮಾಡಲಾರದ ದೇಶದ ಮೇಲೆ ಜನರು ಭರವಸವಿಟ್ಟಿದ್ದಾರೆ ಎಂಬುದೇ ಇದರರ್ಥ.
IRVKN   ದಕ್ಷಿಣ ಸೀಮೆಯ * ದಕ್ಷಿಣ ಸೀಮೆಯ ನೆಗೆವ್. ನೀರಾನೆಯ ವಿಷಯವಾದ ದೈವೋಕ್ತಿ.
ರಾಯಭಾರಿಗಳು ಗಂಡು ಕತ್ತೆಗಳ ಬೆನ್ನುಗಳ ಮೇಲೆ ತಮ್ಮ ಧನವನ್ನೂ, ಒಂಟೆಗಳ ಡುಬ್ಬಗಳ ಮೇಲೆ ತಮ್ಮ ದ್ರವ್ಯವನ್ನೂ ಹೊರಿಸಿಕೊಂಡು,
ಮೃಗೇಂದ್ರ, ಸಿಂಹ, ಸರ್ಪ, ಹಾರುವ ಉರಿಮಂಡಲ ಇವುಗಳಿಂದ ಭಯಂಕರವಾಗಿಯೂ, ಶ್ರಮಸಂಕಟಗಳನ್ನು ಉಂಟು ಮಾಡುವ ದೇಶದ ಮಾರ್ಗವಾಗಿ
ನಿಷ್ಪ್ರಯೋಜಕವಾದ ಜನಾಂಗದ ಬಳಿಗೆ ಹೋಗುತ್ತಾರೆ.