Bible Language

Nehemiah 9:5 (LXXEN) English version of the Septuagint Bible

Versions

KNV   ಲೇವಿಯರಾದ ಯೇಷೂವನೂ ಕದ್ಮೀಯೇಲನೂ ಬಾನೀಯೂ ಹಷ ಬ್ನೆಯೂ ಶೇರೇಬ್ಯನೂ ಹೋದೀಯನೂ ಶೆಬನ್ಯನೂ ಪೆತಹ್ಯನೂ ಜನರಿಗೆ ಹೇಳಿದ್ದೇನಂದರೆ--ನೀವು ಎದ್ದು ನಿಮ್ಮ ದೇವರಾಗಿರುವ ಕರ್ತನನ್ನು ಎಂದೆಂದಿಗೂ ಸ್ತುತಿಸಿರಿ ಅಂದನು. ಹೀಗೆ ಅವರು--ಸಕಲ ಸ್ತುತಿ ಸ್ತೋತ್ರಗಳಿಗಿಂತ ಉನ್ನತವಾದ ನಿನ್ನ ಘನವುಳ್ಳ ಹೆಸರಿಗೆ ಕೊಂಡಾಟವಾಗಲಿ.
ERVKN   ಬಳಿಕ, ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಮತ್ತು ಪೆತಹ್ಯ ಎಂಬವರು, “ಎದ್ದುನಿಂತುಕೊಂಡು ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಿದರು. ದೇವರು ಯಾವಾಗಲೂ ಇದ್ದಾತನಾಗಿದ್ದಾನೆ ಮತ್ತು ಯಾವಾಗಲೂ ಇರುವಾತನಾಗಿದ್ದಾನೆ. ನಿನ್ನ ಮಹಿಮಾಪೂರ್ಣವಾದ ಹೆಸರನ್ನು ಜನರು ಕೊಂಡಾಡಲಿ; ನಿನ್ನ ಹೆಸರು ಎಲ್ಲಾ ಸ್ತುತಿ ಕೀರ್ತನೆಗಳಿಗೆ ಮಿಗಿಲಾಗಿ ಎತ್ತಲ್ಪಡಲಿ.
IRVKN   ಆನಂತರ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬುವವರು, “ಏಳಿರಿ, ನಮ್ಮ ದೇವರಾದ ಯೆಹೋವನಿಗೆ ಯುಗಯುಗಕ್ಕೂ ಸ್ತೋತ್ರವನ್ನು ಸಲ್ಲಿಸಿರಿ. ಯೆಹೋವನೇ, ಸರ್ವಸ್ತುತಿ ಕೀರ್ತನೆಗಳಿಗೂ ಮೀಗಿಲಾಗಿರುವ ನಿನ್ನ ಮಹಾನಾಮಕ್ಕೆ ಮಹಿಮೆಯುಂಟಾಗಲಿ.