Bible Language

2 Chronicles 36:10 (LITV) Literal Translation of the Holy Bible

Versions

KNV   ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು.
ERVKN   ವಸಂತ ಕಾಲದಲ್ಲಿ ನೆಬೂಕದ್ನೆಚ್ಚರನು ತನ್ನ ಸೇವಕರನ್ನು ಕಳುಹಿಸಿ ಯೆಹೋಯಾಕೀನನನ್ನು ಕರೆಯಿಸಿದನು. ಸೇವಕರು ದೇವಾಲಯದ ಕೆಲವು ವಸ್ತುಗಳನ್ನೂ ಅವನ ಜೊತೆಯಲ್ಲಿ ಬಾಬಿಲೋನಿಗೆ ತೆಗೆದುಕೊಂಡು ಹೋದರು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿಗೆ ಚಿದ್ಕೀಯನನ್ನು ಹೊಸ ಅರಸನನ್ನಾಗಿ ಮಾಡಿದನು. ಚಿದ್ಕೀಯನು ಯೆಹೋಯಾಕೀನನ ಸಂಬಂಧಿಕನಾಗಿದ್ದನು.
IRVKN   ನೆಬೂಕದ್ನೆಚ್ಚರನು ವರ್ಷ ಆರಂಭದಲ್ಲಿ ಅವನನ್ನೂ, ಯೆಹೋವನ ದೇವಾಲಯದ ಬೆಲೆಯುಳ್ಳ ಸಾಮಾನುಗಳನ್ನು ಬಾಬಿಲೋನಿಗೆ ತರಿಸಿಕೊಂಡು, ಅವನ ಚಿಕ್ಕಪ್ಪನಾದ * ಚಿಕ್ಕಪ್ಪನಾದ ಅಥವಾ ಸಹೋದರನಾದ. ಚಿದ್ಕೀಯನನ್ನು ಯೆಹೂದ ಮತ್ತು ಯೆರೂಸಲೇಮಿನ ಅರಸನನ್ನಾಗಿ ಮಾಡಿದನು. PS