Bible Language

Deuteronomy 16:6 (KJV) King James Version

Versions

KNV   ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ನೀನು ಪಸ್ಕವನ್ನು ಸಾಯಂಕಾಲದಲ್ಲಿ ಸೂರ್ಯನು ಅಸ್ತಮಿಸುವಾಗ ನೀನು ಐಗುಪ್ತವನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು.
ERVKN   ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷವಾದ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿಯೇ ಸಾಯಂಕಾಲ ಸೂರ್ಯಾಸ್ತಮಾನ ಕಾಲದಲ್ಲಿ ಪಸ್ಕಹಬ್ಬದ ಪಶುವನ್ನು ಅರ್ಪಿಸಬೇಕು. ದೇವರು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಕಾಲವನ್ನು ಪವಿತ್ರ ದಿನವು ನಿಮಗೆ ನೆನಪು ಮಾಡುತ್ತದೆ.
IRVKN   ಆತನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ, ನೀವು ಐಗುಪ್ತದೇಶದಿಂದ ಹೊರಟುಬಂದ ಸಮಯ, ಅಂದರೆ ಸಾಯಂಕಾಲದಲ್ಲಿ ಪಸ್ಕದ ಯಜ್ಞವನ್ನು ಸಮರ್ಪಿಸಬೇಕು.