Bible Language

2 Kings 12:18 (KJV) King James Version

Versions

KNV   ಆಗ ಯೆಹೂದದ ಅರಸನಾದ ಯೆಹೋವಾಷನೂ ಯೆಹೂದದ ಅರಸುಗಳಾಗಿರುವ ತನ್ನ ತಂದೆಗಳಾದ ಯೆಹೋಷಾಫಾಟನೂ ಯೆಹೋರಾಮನೂ ಅಹ ಜ್ಯನೂ ಅರ್ಪಿಸಿದ ಎಲ್ಲಾ ಪ್ರತಿಷ್ಠಿತವಾದವುಗಳನ್ನೂ ತಾನು ಪರಿಶುದ್ಧ ಮಾಡಿದವುಗಳನ್ನೂ ಕರ್ತನ ಮನೆಯ ಬೊಕ್ಕಸದಲ್ಲಿಯೂ ಅರಸನ ಮನೆಯಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ತಕ್ಕೊಂಡು ಅರಾಮ್ಯರ ಅರಸ ನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟುಹೋದನು.
ERVKN   ಯೆಹೋಷಾಫಾಟ್, ಯೆಹೋರಾಮ್ ಮತ್ತು ಅಹಜ್ಯರು ಯೆಹೂದದ ರಾಜರಾಗಿದ್ದರು. ಅವರೆಲ್ಲ ಯೆಹೋವಾಷನ ಪೂರ್ವಿಕರು. ಅವರು ಅನೇಕ ವಸ್ತುಗಳನ್ನು ಯೆಹೋವನಿಗೆ ಕೊಟ್ಟಿದ್ದರು. ಅವುಗಳನ್ನೆಲ್ಲ ಆಲಯದಲ್ಲಿ ಇಟ್ಟಿದ್ದರು. ಯೆಹೋವಾಷನೂ ಯೆಹೋವನಿಗೆ ಅನೇಕ ವಸ್ತುಗಳನ್ನು ಕೊಟ್ಟಿದ್ದನು. ಯೆಹೋವಾಷನು ಅವುಗಳ ಜೊತೆಗೆ, ಆಲಯದಲ್ಲಿದ್ದ ಮತ್ತು ತನ್ನ ಮನೆಯಲ್ಲಿದ್ದ ಬಂಗಾರವನ್ನೆಲ್ಲ ತೆಗೆದುಕೊಂಡನು. ನಂತರ ಯೆಹೋವಾಷನು ಬೆಲೆಬಾಳುವ ವಸ್ತುಗಳನ್ನೆಲ್ಲ ಅರಾಮ್ಯರ ರಾಜನಾದ ಹಜಾಯೇಲನಿಗೆ ಕಳುಹಿಸಿದನು. ಆದ್ದರಿಂದ ಹಜಾಯೇಲನು ಜೆರುಸಲೇಮಿನ ವಿರುದ್ಧ ಯುದ್ಧಮಾಡದೆ ಹೊರಟುಹೋದನು. 19”ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋವಾಷನು ಮಾಡಿದ ಇತರ ಮಹಾ ಕಾರ್ಯಗಳ ಬಗ್ಗೆ ಬರೆಯಲಾಗಿದೆ.