Bible Language

2 Kings 4 (HCSB) Holman Christian Standard Bible

Versions

KNV   ಪ್ರವಾದಿಗಳ ಮಕ್ಕಳ ಹೆಂಡತಿಯರಲ್ಲಿ ಒಬ್ಬಳು ಎಲೀಷನಿಗೆ ಕೂಗಿ--ನಿನ್ನ ದಾಸ ನಾದ ನನ್ನ ಗಂಡನು ಸತ್ತನು; ನಿನ್ನ ದಾಸನು ಕರ್ತನಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ; ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸ ರಾಗಿ ತೆಗೆದುಕೊಳ್ಳಲು ಬಂದಿದ್ದಾನೆ ಅಂದಳು.
ERVKN   ಒಂದು ದಿನ ಪ್ರವಾದಿಮಂಡಲಿಯವರಲ್ಲೊಬ್ಬನ ಪತ್ನಿಯು ಗೋಳಾಡುತ್ತಾ ಎಲೀಷನಲ್ಲಿಗೆ ಹೋಗಿ, “ನನ್ನ ಗಂಡನು ನಿನಗೆ ಸೇವಕನಂತಿದ್ದನು. ಈಗ ನನ್ನ ಗಂಡ ಸತ್ತಿದ್ದಾನೆ! ಅವನು ಯೆಹೋವನಲ್ಲಿ ಭಯಭಕ್ತಿ ಉಳ್ಳವನಾಗಿದ್ದದು ನಿನಗೆ ತಿಳಿದಿದೆ. ಆದರೆ ಅವನು ಒಬ್ಬ ಮನುಷ್ಯನಿಗೆ ಹಣವನ್ನು ಕೊಡಬೇಕಾಗಿದೆ. ಈಗ ಮನುಷ್ಯನು ನನ್ನ ಎರಡು ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳಲು ಬರುತ್ತಿದ್ದಾನೆ!” ಎಂದು ಹೇಳಿದಳು.
IRVKN   {ಬಡ ವಿಧವೆಗೆ ಎಣ್ಣೆದಾನ} PS ಒಂದು ದಿನ ಪ್ರವಾದಿ ಮಂಡಳಿಯಲ್ಲಿನ ಒಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ, “ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು. ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನು ಎಂಬುದು ನಿನಗೆ ಗೊತ್ತಿದೆಯಲ್ಲಾ. ಸಾಲಕೊಟ್ಟವನು, ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ಕರೆದುಕೊಂಡು ಹೋಗುವುದಕ್ಕೆ ಬಂದಿದ್ದಾನೆ” ಎಂದು ಮೊರೆಯಿಟ್ಟಳು.