Bible Language

Hosea 10:1 (GNTTRP) Tischendorf Greek New Testament

Versions

KNV   ಇಸ್ರಾಯೇಲು ಬರಿದಾದ ದ್ರಾಕ್ಷೇಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿ ಸುತ್ತಾನೆ; ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಒಳ್ಳೆಯ ತನದ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿ ದ್ದಾನೆ.
ERVKN   ಇಸ್ರೇಲ್ ಅಧಿಕ ಹಣ್ಣುಗಳನ್ನು ಕೊಡುವ ದ್ರಾಕ್ಷಾಬಳ್ಳಿಯಂತಿದೆ. ಆದರೆ ಇಸ್ರೇಲ್ ಅಭಿವೃದ್ಧಿ ಹೊಂದಿದ ಹಾಗೆ ಅವರು ಸುಳ್ಳುದೇವರುಗಳನ್ನು ಪೂಜಿಸಲು ಹೆಚ್ಚುಹೆಚ್ಚು ವೇದಿಕೆಗಳನ್ನು ಕಟ್ಟಿದರು. ಅವರ ದೇಶವು ಉತ್ತಮವಾಗುತ್ತಾ ಬರುತ್ತಿರುವಾಗ ಅವರು ತಮ್ಮ ಸುಳ್ಳುದೇವರುಗಳಿಗೆ ಉತ್ತಮ ಕಲ್ಲುಗಳಿಂದ ವೇದಿಕೆಗಳನ್ನು ಕಟ್ಟಲು ಪ್ರಾರಂಭಿಸಿದರು.
IRVKN   {ಹೋಶೇಯನು ಇಸ್ರಾಯೇಲರಿಗೆ ನೀಡಿದ ಎಚ್ಚರಿಕೆ} PS ಇಸ್ರಾಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆಯಾಗಿದೆ; ಹಣ್ಣುಬಿಟ್ಟುಕೊಂಡಿದೆ;
ಅದರ ಹಣ್ಣುಗಳು ಹೆಚ್ಚಿದಷ್ಟೂ ಯಜ್ಞವೇದಿಗಳನ್ನು ಹೆಚ್ಚಿಸಿಕೊಂಡಿದೆ;
ಅದರ ಭೂಮಿಯು ಎಷ್ಟು ಒಳ್ಳೆಯದೋ, ಅಷ್ಟು ಒಳ್ಳೆಯ ವಿಗ್ರಹ ಸ್ತಂಭಗಳನ್ನು ನಿರ್ಮಾಣ ಮಾಡಿಕೊಂಡಿದೆ.