Bible Language

2 Samuel 11:8 (GNTERP) Textus Receptus Greek New Testament

Versions

KNV   ದಾವೀದನು ಊರೀಯನಿಗೆ--ನೀನು ನಿನ್ನ ಮನೆಗೆ ಹೋಗಿ ನಿನ್ನ ಕಾಲುಗಳನ್ನು ತೊಳಕೋ ಅಂದನು. ಊರೀಯನು ಅರಸನ ಮನೆಯಿಂದ ಹೊರಡುವಾಗ ಅರಸನ ಭೋಜನವು ಅವನ ಸಂಗಡವೇ ಹೋಯಿತು.
ERVKN   ನಂತರ ದಾವೀದನು ಊರೀಯನಿಗೆ, “ಮನೆಗೆ ಹೋಗಿ ವಿಶ್ರಾಂತಿಯನ್ನು ಪಡೆ” ಎಂದನು. ಊರೀಯನು ರಾಜನ ಮನೆಯನ್ನು ಬಿಟ್ಟುಹೋದನು. ಊರೀಯನಿಗೆ ರಾಜನು ಕೊಡುಗೆಗಳನ್ನು ಸಹ ಕಳುಹಿಸಿದನು.
IRVKN   ಅವನಿಗೆ, “ಮನೆಗೆ ಹೋಗಿ ಕೈಕಾಲು ತೊಳೆದುಕೋ * ಮನೆಗೆ ಹೋಗಿ ಕೈಕಾಲು ತೊಳೆದುಕೋ ಕೇವಲ ಕೆರಗಳನ್ನು ಧರಿಸಿಕೊಂಡು ಧೂಳಿನ ರಸ್ತೆಗಳಲ್ಲಿನ ಮಾಡಿದ ಸುದೀರ್ಘ ಪ್ರಯಾಣದ ನಂತರ ಉರಿಯನಿಗೆ ದಣಿವಾರಿಸಿಕೊಳ್ಳುವುದಕ್ಕಿರುವ ಆಮಂತ್ರಣವೇ ಹೊರತು ಬೇರೇನೂ ಇಲ್ಲ ಎಂದು ಅನೇಕರು ಯೋಚಿಸುತ್ತಾರೆ (ಆದಿ 18.4; 19.2; 24.32; ನ್ಯಾಯ 19.21). ಆದಾಗ್ಯೂ, ಇತರ ವ್ಯಾಖ್ಯಾನಕಾರರು, ಇದು ಕೆಲವೊಂದು ಸಂದರ್ಭಗಳಲ್ಲಿ ಲೈಂಗಿಕ ಸಂಭೋಗವನ್ನು ಸೂಚಿಸುವಂಥ ಸೌಮ್ಯೋಕ್ತಿಯಾಗಿದೆ ಎಂದು ಉಲ್ಲೇಖಿಸುತ್ತಾರೆ, ಏಕೆಂದರೆ “ಪಾದಗಳು” ಎಂಬ ಪದವು ಕೆಲವೊಮ್ಮೆ ಜನನಾಂಗಗಳನ್ನು ಸೂಚಿಸುತ್ತದೆ (ನೋಡಿರಿ, ಉದಾಹರಣೆಗೆ, ರೂತ 3.4, 7, 8; ಪರಮ 5.3). ಉರಿಯನು ಲೈಂಗಿಕತೆಯ ಬಗ್ಗೆ ಯೋಚಿಸುವಂತೆ ಮಾಡುವಂಥ ಸಂದಿಗ್ಧ ಅರ್ಥವುಳ್ಳ ಅಭಿವ್ಯಕ್ತಿಯನ್ನು ದಾವೀದನು ಉದ್ದೇಶಪೂರ್ವಕವಾಗಿ ಬಳಸಿರುವ ಸಾಧ್ಯತೆಯಿದೆ. ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೆ ಅರಸನ ಭೋಜನ ಪದಾರ್ಥಗಳು ಹೋದವು. PEPS