Bible Language

2 Chronicles 35:18 (GENESIS_27_32)

Versions

KNV   ಪ್ರವಾದಿಯಾದ ಸಮುವೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿದ್ದಿಲ್ಲ. ಇಸ್ರಾಯೇಲಿನ ಸಮಸ್ತ ಅರಸುಗಳಲ್ಲಿ ಯೋಷೀಯನೂ ಯಾಜಕರೂ ಲೇವಿಯರೂ ಸಿದ್ಧವಾಗಿದ್ದ ಯೆಹೂದ ಇಸ್ರಾಯೇಲ್ಯ ರೆಲ್ಲರೂ ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.
ERVKN   ಪ್ರವಾದಿಯಾದ ಸಮುವೇಲನ ಕಾಲದಿಂದ ರೀತಿಯಾಗಿ ಪಸ್ಕಹಬ್ಬವನ್ನು ಎಂದೂ ಆಚರಿಸಿರಲಿಲ್ಲ. ಇಸ್ರೇಲರ ಅರಸರಲ್ಲಿ ಯಾರೂ ರೀತಿಯಾಗಿ ಹಬ್ಬ ಆಚರಿಸಿರಲಿಲ್ಲ. ಅರಸನಾದ ಯೋಷೀಯ, ಯಾಜಕರು, ಲೇವಿಯರು, ಯೆಹೂದದ ಜನರು, ಇಸ್ರೇಲಿನಿಂದ ಬಂದ ಜನರು ಮತ್ತು ಜೆರುಸಲೇಮಿನ ಜನರು ವಿಶೇಷ ರೀತಿಯಲ್ಲಿ ಪಸ್ಕಹಬ್ಬವನ್ನು ಆಚರಿಸಿದರು.