Bible Language

1 Kings 13:18 (ERVKN) Easy to Read Version - Kannadam

Versions

KNV   ಇವನು ಅವನಿಗೆ--ನಾನು ನಿನ್ನ ಹಾಗೆಯೇ ಪ್ರವಾದಿಯಾಗಿದ್ದೇನೆ; ಮತ್ತು ಒಬ್ಬ ದೂತನು ಕರ್ತನ ಮಾತಿನಿಂದ ನನಗೆ--ಅವನು ರೊಟ್ಟಿ ತಿಂದು ನೀರು ಕುಡಿಯಲು ಅವನನ್ನು ಹಿಂದಕ್ಕೆ ನಿನ್ನ ಮನೆಗೆ ಕರಕೊಂಡು ಬಾ ಎಂದು ಹೇಳಿದನು ಅಂದನು. ಆದರೆ ಇವನು ಅವನಿಗೆ ಸುಳ್ಳು ಹೇಳಿದನು.
ERVKN   ಆಗ ಪ್ರವಾದಿಯು, “ಆದರೆ ನಾನೂ ನಿನ್ನಂತೆಯೇ ಒಬ್ಬ ಪ್ರವಾದಿ” ಎಂದು ಹೇಳಿದನು. ನಂತರ ವಯಸ್ಸಾದ ಪ್ರವಾದಿಯು ಅವನಿಗೆ ‘ಯೆಹೋವನಿಂದ ಒಬ್ಬ ದೇವದೂತನು ನನ್ನ ಬಳಿಗೆ ಬಂದಿದ್ದನು. ದೂತನು ನಿನ್ನನ್ನು ನನ್ನ ಮನೆಗೆ ಕರೆತರಲು ನಿನ್ನೊಂದಿಗೆ ಅನ್ನಪಾನಗಳನ್ನು ತೆಗೆದುಕೊಳ್ಳಲು ನನಗೆ ತಿಳಿಸಿದನು” ಎಂದು ಸುಳ್ಳು ಹೇಳಿದನು.
IRVKN   ಆಗ ಮುದುಕನು, “ನಾನು ನಿನ್ನಂತೆ ಪ್ರವಾದಿಯಾಗಿದ್ದೇನೆ. ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು, ನಿನ್ನನ್ನು ಕರೆದುಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಯೆಹೋವನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ ದೇವರ ಮನುಷ್ಯನಿಗೆ ಪ್ರವಾದಿ ಹೇಳಿದ ಮಾತು ಸುಳ್ಳಾಗಿತ್ತು.