Bible Language

2 Kings 13:23 (ERVEN) Easy to Read - English

Versions

KNV   ಆದರೆ ಕರ್ತನು ಅಬ್ರಹಾಮನ ಇಸಾಕನ ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಅವರಿಗೆ ದಯಮಾಡಿ ಅವರ ಮೇಲೆ ಕೃಪೆ ತೋರಿಸಿ ಅವರ ಕಡೆಗೆ ತಿರುಗಿದನು. ಇನ್ನೂ ಅವರನ್ನು ನಾಶ ಮಾಡಲು ಅವರನ್ನು ತನ್ನಿಂದ ತೊರೆದು ಬಿಡಲು ಮನಸ್ಸಾಗಲಿಲ್ಲ, ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲೂ ಇಲ್ಲ.
ERVKN   ಆದರೆ ಯೆಹೋವನು ಇಸ್ರೇಲರಿಗೆ ದಯಾಪರನಾಗಿದ್ದನು. ಯೆಹೋವನು ಕರುಣೆಯಿಂದ ಇಸ್ರೇಲರಿಗೆ ಅಭಿಮುಖನಾದನು. ಏಕೆಂದರೆ ಆತನು ಅಬ್ರಹಾಮನೊಂದಿಗೆ ಇಸಾಕನೊಂದಿಗೆ ಮತ್ತು ಯಾಕೋಬನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದನು. ಯೆಹೋವನು ಇಸ್ರೇಲರನ್ನು ನಾಶಗೊಳಿಸಲಿಲ್ಲ. ಅವರನ್ನು ಇನ್ನೂ ತಳ್ಳಿಬಿಟ್ಟಿರಲಿಲ್ಲ.
IRVKN   ಆದರೂ ಯೆಹೋವನು ಅವರನ್ನು ಸಂಪೂರ್ಣವಾಗಿ ಹಾಳುಮಾಡಲಿಲ್ಲ. ಅವರನ್ನು ಕಾಲದಲ್ಲಿಯೂ ತನ್ನ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾನು ಅಬ್ರಹಾಮ್, ಇಸಾಕ್, ಯಾಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪು ಮಾಡಿಕೊಂಡು ಅವರಿಗೆ ದಯೆ ತೋರಿಸಿ, ಅವರ ಮೇಲೆ ಅನುಕಂಪಗೊಂಡನು. PEPS