Versions
KNV ಅಧಿಕಾರಿಗಳು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಇದಲ್ಲದೆ ಹತ್ತು ಮಂದಿ ಯಲ್ಲಿ ಒಬ್ಬನು ಪರಿಶುದ್ಧ ಪಟ್ಟಣವಾದ ಯೆರೂ ಸಲೇಮಿನಲ್ಲಿ ವಾಸವಾಗಿರುವದಕ್ಕೂ ಉಳಿದ ಒಂಭತ್ತು ಮಂದಿ ಇತರ ಪಟ್ಟಣಗಳಲ್ಲಿ ವಾಸವಾಗಿರುವದಕ್ಕೂ ಚೀಟುಗಳನ್ನು ಹಾಕಿದರು.
ERVKN ಇಸ್ರೇಲರ ನಾಯಕರುಗಳು ಜೆರುಸಲೇಮ್ ನಗರದೊಳಗೆ ಬಂದು ನೆಲೆಸಿದ್ದರು. ಬೇರೆ ಯಾರು ಪಟ್ಟಣದೊಳಗೆ ನೆಲೆಸಬಹುದೆಂಬುದನ್ನು ಉಳಿದ ಇಸ್ರೇಲರು ತೀರ್ಮಾನ ಮಾಡಬೇಕಿತ್ತು. ಆದ್ದರಿಂದ ಚೀಟು ಹಾಕಿದರು. ಹತ್ತು ಮಂದಿಯಲ್ಲಿ ಒಬ್ಬನು ಪರಿಶುದ್ಧ ನಗರವಾದ ಜೆರುಸಲೇಮಿನಲ್ಲಿ ವಾಸಿಸಬೇಕೆಂದೂ ಉಳಿದ ಒಂಭತ್ತು ಮಂದಿ ತಮ್ಮ ಸ್ವಂತ ಊರುಗಳಲ್ಲಿ ವಾಸಿಸಬಹುದೆಂದೂ ಇದರಿಂದ ತಿಳಿದುಬಂತು.
IRVKN {ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದವರ ಪಟ್ಟಿ} PS ಇಸ್ರಾಯೇಲರ ಪ್ರಮುಖರು ಮಾತ್ರ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತು ಜನರಲ್ಲಿ ಒಂಭತ್ತು ಜನ ತಮ್ಮ ತಮ್ಮ ಊರುಗಳಲ್ಲಿ ವಾಸಮಾಡುತ್ತಿದ್ದರು, ಒಬ್ಬನು ಮಾತ್ರ ಪವಿತ್ರನಗರವಾಗಿರುವ ಯೆರೂಸಲೇಮಿನಲ್ಲಿ ವಾಸಮಾಡಬೇಕು ಎಂದು ಚೀಟು ಹಾಕಿ ಅವನನ್ನು ಗೊತ್ತು ಮಾಡುತ್ತಿದ್ದರು.