Bible Language

1 Kings 20:27 (AKJV) American King James Version

Versions

KNV   ಆದದರಿಂದ ಇಸ್ರಾಯೇಲಿನ ಮಕ್ಕಳು ಲೆಕ್ಕ ಮಾಡಲ್ಪಟ್ಟು ಬೇಕಾದದ್ದನ್ನು ಸಿದ್ಧಮಾಡಿಕೊಂಡು ಅವರಿಗೆ ಎದುರಾಗಿ ಹೊರಟರು. ಇಸ್ರಾಯೇಲಿನ ಮಕ್ಕಳು ಅವರಿಗೆದುರಾಗಿ ದಂಡಿಳಿದಿರುವಾಗ ಅವರು ಮೇಕೆ ಮರಿಗಳ ಎರಡು ಮಂದೆಗಳ ಹಾಗಿದ್ದರು; ಆದರೆ ಅರಾಮ್ಯರು ದೇಶವನ್ನು ತುಂಬಿಕೊಂಡಿದ್ದರು.
ERVKN   ಇಸ್ರೇಲರೂ ಯುದ್ಧಕ್ಕೆ ಸಿದ್ಧರಾದರು. ಇಸ್ರೇಲಿನ ಜನರು ಅರಾಮ್ಯದ ಸೇನೆಯೊಡನೆ ಹೋರಾಡಲು ಹೋದರು. ಅವರು ಅರಾಮ್ಯದ ಪಾಳೆಯಕ್ಕೆ ಎದುರಾಗಿ ತಮ್ಮ ಪಾಳೆಯ ಮಾಡಿಕೊಂಡರು. ಶತ್ರುಗಳಿಗೆ ಹೋಲಿಸಿದರೆ ಇಸ್ರೇಲರು ಆಡುಗಳ ಎರಡು ಚಿಕ್ಕಮಂದೆಯಂತೆ ಕಾಣುತ್ತಿದ್ದರು. ಆದರೆ ಅರಾಮ್ಯದ ಸೈನಿಕರು ಎಲ್ಲಾ ಪ್ರದೇಶವನ್ನು ವ್ಯಾಪಿಸಿದ್ದರು.
IRVKN   ಇಸ್ರಾಯೇಲರು ಸಹ ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಅವರಿಗೆ ವಿರುದ್ಧವಾಗಿ ಬಂದರು. ಅರಾಮ್ಯರು ದೇಶದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರು. ಆಡುಮರಿಗಳ ಎರಡು ಹಿಂಡುಗಳಂತಿರುವ ಇಸ್ರಾಯೇಲರು ಅವರ ಎದುರಿನಲ್ಲಿ ಪಾಳೆಯ ಮಾಡಿಕೊಂಡರು.